Monday, January 13, 2025
Homeಕಾರ್ಕಳಮಂಗಳೂರು-ಮೂಡಬಿದ್ರಿ-ಕಾರ್ಕಳ ಮಾರ್ಗದಲ್ಲಿ ನಾಲ್ಕು ಕೆ ಎಸ್ ಆರ್ ಟಿ ಸಿ ಬಸ್ ಸಂಚಾರಕ್ಕೆ ಮಂಗಳೂರು ಕೆ...

ಮಂಗಳೂರು-ಮೂಡಬಿದ್ರಿ-ಕಾರ್ಕಳ ಮಾರ್ಗದಲ್ಲಿ ನಾಲ್ಕು ಕೆ ಎಸ್ ಆರ್ ಟಿ ಸಿ ಬಸ್ ಸಂಚಾರಕ್ಕೆ ಮಂಗಳೂರು ಕೆ ಎಸ್ ಆರ್ ಟಿ ಸಿ ವಿಭಾಗ ನಿರ್ಧಾರಕ್ಕೆ ವಿಧಾನ ಪರಿಷತ್ತಿನ ಶಾಸಕ ಶ್ರೀ ಐವನ್ ಡಿ ಸೋಜಾರವರ ಕಾರ್ಯ ಸ್ವಾಗತಾರ್ಹ

ಮಂಗಳೂರು-ಮೂಡಬಿದ್ರಿ-ಕಾರ್ಕಳ ಮಾರ್ಗದಲ್ಲಿ ಶಕ್ತಿ ಯೋಜನೆಗಳ ಫಲಾನುಭವಿಗಳಿಗೆ ಯಾವುದೇ ಬಸ್ ಸಂಚಾರ ಇಲ್ಲದೇ ತೊಂದರೆ ಉಂಟಾಗಿದ ಬಗ್ಗೆ ಕಳೆದ ಕೆ ಡಿ ಪಿ ಸಭೆಯಲ್ಲಿ ಪ್ರಸ್ತಾಪಿಸಿ, ಪ್ರಸ್ತುತ ಬೆಳಗಾವಿ ಅಧಿವೇಶನದಲ್ಲಿ ಚುಕ್ಕಗುರುತಿನ ಪ್ರಶ್ನೆ ಮತ್ತು ಗಮನ ಸೆಳೆಯುವ ಪ್ರಶ್ನೆ ಹಾಕಿರುವ ಮೂಲಕ ಅಧಿಕಾರಿಗಳ ಜೊತೆ ಸಭೆ ನಡೆಸಿ ದಿ 9/12/2024 ರಂದು ಪ್ರಾದೇಶಿಕ ಆಯುಕ್ತರು 4 ಪರ್ಮಿಟ್ ಗಳನ್ನು ನೀಡಿ, ಬಸ್ ಪ್ರಾಂಭಿಸುವುದಾಗಿ ತಿಳಿಸಿದರು.

ಆದರೆ ಬಸ್ ಮತ್ತು ಚಾಲಕರ ಲಭ್ಯತೆ ಇಲ್ಲದೆ ಕಾರಣಕ್ಕಾಗಿ ಶುಕ್ರವಾರ ಬೆಳಿಗ್ಗೆಯಿಂದ 4 ಬಸ್ ಸಂಚಾರ ಪ್ರಾರಂಭಿಸಲಾಗುವುದು ಮತ್ತು ಹೆಚ್ಚಿನ ಬಸ್ ಗಳನ್ನು ಮಂಗಳೂರು ನಗರದಲ್ಲಿ ಮೂಡಬಿದ್ರೆ-ಕಾರ್ಕಳ ಮಾರ್ಗದಲ್ಲಿ ಸಂಚರಿಸಲಾಗುವುದು ಎಂದು ಸಾರಿಗೆ ಇಲಾಖೆ ಅನುಮತಿ ನೀಡಲಾಗಿದೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿ ಸೋಜಾ ರವರು ತಿಳಿಸಿದ್ದಾರೆ
ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ಮಹಾ ಸ್ವಾಮೀಜಿ
ಸಂತೋಷ ವ್ಯೆಕ್ತ ಪಡಿಸಿ ನಮ್ಮ ಪರಮ ಪುನೀತ ಬೆಳೆಯುತ್ತಿರುವ ಜೈನ ಕಾಶಿ ಮೂಡು ಬಿದಿರೆ ಕಾರ್ಕಳ ದ ನಾಗರೀಕ ರ ಬಹು ಸಮಯದ ಕನಸು ನೆನಸಾಗಿದೆ ಮುಂದೆ ಉತ್ತಮ ಸೇವೆ ನೀಡಿ ಪ್ರಯಾಣಿಕರ ಪ್ರೀತಿಗೆ ಸಾರಿಗೆ ಇಲಾಖೆ ಪಾತ್ರ ವಾಗಲಿ ಮತ್ತು ಮಾನ್ಯ ಸಾರಿಗೆ ಸಚಿವರಿಗೆ,ಗಮನ ಸೆಳೆವ ಕಾರ್ಯ ಮಾಡಿದ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿ ಸೋಜಾ
ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸ್ವಾಮೀಜಿ ಸರ್ವ ನಾಗರಿಕರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular