ಮುಲ್ಕಿ ಸರಕಾರಿ ಶಾಲೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ನಗರಾಡಳಿತದಿಂದ ಬೇಕಾದ ಸಹಾಯ ನೀಡಲು ಆಡಳಿತ ಬದ್ದವಿದೆ ಎಂದು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀ ಸತೀಶ್ ಅಂಚನ್ ಹೇಳಿದರು.
ಮುಲ್ಕಿ ಕೆ ಎಸ್ ರಾವ್ ನಗರದ ಪಿ ಎಂಶ್ರೀ ಸರಕಾರಿ ಮಾದರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದಿಂದ ಒದಗಿಸಿದ ಶೂ ಸ್ಟಾಕ್ಸ್ ಗಳನ್ನು ವಿತರಿಸಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಮಲ್ಗಿ ಹೋಬಳಿ ಮಟ್ಟದ ಶಾಲಾ ಬಾಲಕಿಯರ ಕಬಡ್ಡಿ ವಿಭಾಗದಲ್ಲಿ ಪ್ರಥಮ ಸ್ಥಾನ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಮಾಲಕರ ಕಬಡ್ಡಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಇನ್ನಿತರ ವಯಕ್ತಿಕ ಪ್ರಶಸ್ತಿ ಪ್ರದಾನ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್ ಅಧ್ಯಕ್ಷರಾದ ಬಿ ಶಿವಪ್ರಸಾದ್, ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ಸ್ಥಳೀಯ ನಗರ ಪಂಚಯತ್ ಸದಸ್ಯರಾದ ವಿಮಲಾ ಪೂಜಾರಿ, ಶೈಲೇಶ್ ಕುಮಾರ್ ಸ್ಥಳೀಯ ವೈದ್ಯರಾದ ಡಾ.ಹರಿಪ್ರಸಾದ್ ಶೆಟ್ಟಿ , ಸಮಾಜ ಸೇವಕ ಮಂಜುನಾಥ್ ಆರ್ ಕೆ, ಮುಖ್ಯೋಪಾಧ್ಯಾಯರಾದ ದಿನೇಶ್ ಕೆ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜ್ಯೋತಿ, ಉಪಾಧ್ಯಕ್ಷ ರಾಜೇಶ್ ಭಟ್, ಶಿಕ್ಷಕರಾದ ಶ್ರೀದೇವಿ , ಸುಜಾತ ಮತ್ತಿತರರು ಉಪಸ್ಥಿತರಿದ್ದರು.