ಪೆರ್ನೆ: ಮಾ:24ರಂದು ಗೊನೆ ಮೂಹುರ್ತಗೊಂಡು ಇದೇ ಬರುವ ಮಾ:28ರಂದು ಬಿಳಿಯೂರು ಧರ್ಮದೈವ ಶ್ರೀ ಕೊಡಮಾಣಿತ್ತಾಯ ಹಾಗೂ ಕಲ್ಕುಡ ದೈವಗಳ ದೊಂಪದಬಲಿ ನೇಮೋತ್ಸವ ಹಾಗೂ ಮಹಾಮ್ಮಾಯಿ ಅಮ್ಮನವರ ಗೊಂದಲು ಪೂಜೆ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಇವರ ನೇತೃತ್ವದಲ್ಲಿ ಊರಿನ ಗಣ್ಯರು ಹಾಗೂ ಊರು, ಪರವೂರಿನ ಭಕ್ತ ಜನರ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ನಡೆಯಲಿದೆ.