Thursday, May 1, 2025
HomeUncategorizedಸುಮಧುರ ಸಂಜೆಯ ಸಂಗೀತದಲ್ಲಿ ತೇಲಾಡಿದ ಪ್ರೇಕ್ಷಕರು

ಸುಮಧುರ ಸಂಜೆಯ ಸಂಗೀತದಲ್ಲಿ ತೇಲಾಡಿದ ಪ್ರೇಕ್ಷಕರು


ಪ್ರಕೃತಿ ನಾನಾ ಕಲೆಗಳ ಮೂಲ ಕಲೆ ಕಲಾವಿದರು ಬದುಕಿನ ಅನರ್ಘ್ಯ ರತ್ನಗಳು ಕಲೆ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ದೊಡ್ಡ ಮನಸ್ಸು ನಮ್ಮಲ್ಲಿರಬೇಕು ಅದೇ ಭಕ್ತಿರಸ ಗಾನಸುಧಾ ಗಾಯನ ಬದುಕನ್ನು ರೂಪಿಸುತ್ತದೆ ಸುಳ್ಯ ತಾಲೂಕಿನ ಬೆಳ್ಳಾರೆ ಕಳಂಜ ಗ್ರಾಮದ ತಂಟೆಪ್ಪಾಡಿ
ನೀನಾದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಸಂಗೀತಕ್ಕೆ ಗುರುವರೇಣ್ಯರ ಜೊತೆ ಹಾಡುವ ಸೌಭಾಗ್ಯ ಖ್ಯಾತ ಗಾಯಕೀ ಸುಪ್ರಿಯ ರಘುನಂದನ್ ಮತ್ತು ಉದಯೋನ್ಮುಖ ಪ್ರತಿಭೆ ಸುಮಾ ಕೋಟೆ ತುಳು ಭಕ್ತಿಗೀತೆ, ಭಾ ವಗೀತೆ ಜನಪದ ಗೀತೆ ,ಚಲನಚಿತ್ರ ಗೀತೆಗಳನ್ನು ಹಾಡಿ ನಕ್ಷತ್ರವಾಗಿ ಅರಳುವಂತೆ ನೀನಾದ ಸಂಸ್ಥೆಯ ರೂವಾರಿ ವಸಂತಶೆಟ್ಟಿ ಬೆಳ್ಳಾರೆ ಗ್ರಾಮೀಣ ಪ್ರದೇಶದಲ್ಲಿ ವೈವಿಧ್ಯ ಕಲೆಗಳ ಬೆಳವಣಿಗೆಯ ಕನಸು ಕಲ್ಪನೆಯಿಂದ ಸಂಗೀತಕ್ಕೆ ತಾಳ, ಲಯ, ರಾಗ ಮನೋಧರ್ಮ ಪದ ಪಲ್ಲವಿ ಪಲ್ಲವಿಸಿದಾಗ ಮಧುರ ರಾಗ ಸಂಧ್ಯಾ ರಾಗವಾಗುತ್ತದೆ .
ಮೊದಲಿಗೆ ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ, ಓಲುಲ್ಲ ಬೆನಕ ಬೇಗ ಬಲ ತುಳುವಿನಲ್ಲಿ ದೇವರ ಪ್ರಾರ್ಥನೆಯೊಂದಿಗೆ ತುಳು ಹಾಡನ್ನು ಇಬ್ಬರು ಜೊತೆಯಲ್ಲಿ ಹಾಡಿ ತನ್ನ ಗಟ್ಟಿತನವನ್ನು ತೋರಿಸಿದರು .
ತದನಂತರ ರಾಷ್ಟ್ರಕವಿ ಕುವೆಂಪು ಅವರ ವಿರಚಿತ ಸಚ್ಚಿದಾನಂದ ಪರಬ್ರಹ್ಮನಲ್ಲಿ ಇಳಿದು ಬಾ ಬೆಳಗೆ ತಾಯಿ ಇಳಿದು ಬಾಳನ್ನು ಸುಪ್ರಿಯ ಹಾಡಿ ರಂಜಿಸಿದರು .
ತೆರೆದಿದೆ ಮನೆ ಓ.. ಬಾ ಅತಿಥಿ…
ರಾಷ್ಟ್ರಕವಿ ಕುವೆಂಪುರ ಚೆನ್ನಯ್ಯ ಹಾಡನ್ನು ಇಬ್ಬರು ಸುಲಲಿತವಾಗಿ ಹಾಡಿ ಸಂಗೀತದ ಮಧುರ ಗಾನ ತೇಲಿ ಬಂತು ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಹಾಡನ್ನು ಹಾಡಿದರು ಮೈಸೂರು ಅನಂತಸ್ವಾಮಿ ನಿರ್ದೇಶನದ ವಿಕಸಿತ ಮಾಡೆನ್ನ ಅಪಾರ್ಯ ಶಾರ್ವರಿ ರಘುನಂದನ್ ಚೆನ್ನಾಗಿ ಹಾಡಿ ಸೊಗಸಾಗಿ ಮೂಡಿ ಬಂತು.
ಡಿವಿಜಿ ರಚನೆಯ ಬದುಕು ಜಟಕಾ ಬಂಡಿ ಹಾಡನ್ನು ಸುಪ್ರಿಯಾ ಹಾಡಿ ಕಲಾವಿದರು ಪ್ರೀತಿಯಿಂದ ಆಲಿಸಿದರು .
ಗಿಲಿ ಗಿಲಿ ಗಿಲ್ಲಕ್ ಕಾಲು ಗೆಜ್ಜೆ ಜಲಕ್ ಕಂಠದಲ್ಲಿ ಸುಪ್ರಿಯಾ ಸೊಗಸಾಗಿ ಮೂಡಿ ಬಂತು .ಒಲಿದು ಬಾರಮ್ಮಯ್ಯ , ಜಲಜಲ ಕಲಾ ಪಿಜಿ ರಾಡು ಡೆನ್ನಾನ ಡೆನ್ನಾನ ತುಳು ಹಾಡನ್ನು ಸುಪ್ರಿಯ ವಿಶಿಷ್ಟ ಪೂರ್ಣ ಸ್ವರ ರಾಗ ಸೊಗಸಾಗಿ ಮೂಡಿ ಬಂತು
ಬಾಳ ಬಂಗಾರ ನೀನು ಯೇಸು ಕಾಯಂಗಳ ಕಳೆದು ಸುಮಾ ರಂಜಿಸಿದರು ನಗುವ ನಯನ ಸುಬ್ರಾಯ ಚೊಕ್ಕಾಡಿ ವಿರಚಿತ ನಮಿಸು ವೇನು ತಾಯೆ, ಸುಪ್ರಿಯಾ ಸುಮಾ ಕೋಟೆ ಜೊತೆಯಲ್ಲಿ ಹಾಡಿ ಸಂಗೀತದ ಗಾನ ಹೃದಯ ತುಂಬಿದ ಸಂಭ್ರಮ.
ದೀಪವು ನಿನ್ನದೇ ಗಾಳಿಯು ನಿನ್ನದೆ ಸುಪ್ರಿಯಾ ಸಂಗೀತದ ಮಾಧುರ್ಯ ಮನವಿ ತುಂಬಿದರು ನೀ ನಾದದ ನಾದ ಸ್ವರವಾಗಿ ಬೆಳೆಯಿತು. ಪಕ್ಕದಲ್ಲಿ ಕೀಬೋರ್ಡ್ ನಲ್ಲಿ ವಿಶ್ವನಾಥ್ ಶೆಟ್ಟಿ ನಲ್ಯಾಡಿ ತಬಲ ಸಾಯಿ ರಾಮ್ ಪುತ್ತೂರು ,ರಿದಂ ಪ್ಯಾಡ್ ನಲ್ಲಿ ಶ್ರೀಕಾಂತ್ ವರ್ಮ ವಿಟ್ಲ, ನಾರಾಯಣ ಶೇಡಿ ಕಜೆ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ ಬರಹ :ಕುಮಾರ್ ಪೆರ್ನಾಜೆ

RELATED ARTICLES
- Advertisment -
Google search engine

Most Popular