ಕಾಸರಗೋಡು : ಕೇರಳದ ಸರೋವರ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದ ಅನಂತಪುರದ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವರಿಗೆ ಕ್ಷೇತ್ರ ಪಾಲಕನಂತೆ ದೇವಸ್ಥಾನದ ಕೆರೆಯಲ್ಲಿದ್ದ “ದೇವರ ಮೊಸಳೆ” ಕರೆಯಲ್ಪಡುತ್ತಿದ್ದ ಬಬಿಯಾ ಎಂಬ ಮೊಸಳೆ ಇನ್ನಿಲ್ಲ.
ಆ ದೇವಸ್ಥಾನದ ದೇವರ ನೈವೇದ್ಯ ಪ್ರಸಾದವೇ ಈ ಮೊಸಳೆಗೆ ಪ್ರತಿನಿತ್ಯದ ಆಹಾರಕ್ರಮವಾಗಿತ್ತು.ದೇವರಿಗೆ ಪೂಜೆ ಸಲ್ಲಿಸಿದ ನಂತರ ಈ ದೇವರ ಮೊಸಳೆ ಗೆ ನೀಡಲಾಗುತ್ತಿತ್ತು. ಈ ದೇವಸ್ಥಾನಕ್ಕೆ ಬಂದ ಭಕ್ತರೆಲ್ಲರೂ ಬಬಿಯಾ ಮೊಸಳೆಯ ದರ್ಶನ ಪಡೆಯದೆ ಹೋಗುತ್ತಿರಲಿಲ್ಲ. ಈ ದೇವರ ಮೊಸಳೆ ತನ್ನ ಉಸಿರು ನಿಲ್ಲಿಸಿದ್ದು ಅಲ್ಲಿನ ಹಾಗೂ ಊರ ಜನರಿಗೆ ನೋವುಂಟಾಗಿದೆ. ಹಿಂದೊಮ್ಮೆ ಬಬಿಯಾ ಮೊಸಳೆಯು ಕೆರೆಯಿಂದ ಹೊರಬಂದು ದೇವಾಲಯದ ಎದುರು ಕಾಣಿಸಿಕೊಂಡಿದ್ದು ಅಚ್ಚರಿಯ ವಿಷಯ. ಹಲವಾರು ವರ್ಷಗಳಿಂದ ಬಬಿಯಾವು ದೇವಳಕ್ಕೆ ಕ್ಷೇತ್ರ ಪಾಲಕನಂತೆ ಇದ್ದು ಇನ್ನೂ ಮುಂದೆ ಇರುವುದಿಲ್ಲ.