Sunday, January 19, 2025
Homeಮಂಗಳೂರುದಿ. ಬಾಲಕೃಷ್ಣ ಜಿ. ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ: ಆಶ್ರಮದ ಮಕ್ಕಳಿಗೆ ಅನ್ನದಾನ

ದಿ. ಬಾಲಕೃಷ್ಣ ಜಿ. ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ: ಆಶ್ರಮದ ಮಕ್ಕಳಿಗೆ ಅನ್ನದಾನ

ಮಂಗಳೂರು: ಶಕ್ತಿನಗರದ ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಶ್ರೀ ವೈದ್ಯನಾಥ ಶಾಖೆಯ ಮಾಜಿ ಅಧ್ಯಕ್ಷ ದಿ. ಬಾಲಕೃಷ್ಣ ಜಿ. ಅಗಲಿ ಆದಿತ್ಯವಾರಕ್ಕೆ 1 ವರ್ಷ ಸಂದ ಪುಣ್ಯ ಸ್ಮರಣೆಯ ನಿಮಿತ್ತ ಪಂಪುವೆಲ್ ನಲ್ಲಿರುವ ’ಸಂವೇದನಾ ಮಕ್ಕಳ ಮನೆ’ ಆಶ್ರಮಕ್ಕೆ ಅನ್ನದಾನ ಸೇವೆಯ ವ್ಯವಸ್ಥೆ ಮಾಡುವ ಮೂಲಕ ಸ್ಮರಿಸಲಾಯಿತು.

ಸಂವೇದನಾ ಮಕ್ಕಳ ಮನೆಯು ಸುಮಾರು ೨೨ ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ. ದಿ. ಬಾಲಕೃಷ್ಣ. ಜಿ ರವರ ಮನೆಯವರು, ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃ ಶಕ್ತಿ ದುರ್ಗಾ ವಾಹಿನಿ ಶ್ರೀ ವೈದ್ಯನಾಥ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular