ಗುಬ್ಬಿ : ತಾಲ್ಲೂಕಿನ ನಿಟ್ಟೂರು ಹೋಬಳಿ ಶಿವಸಂದ್ರ ಅರಣ್ಯ ಪ್ರದೇಶದಲ್ಲಿ ಸರಿ ಸುಮಾರು 25 ವರ್ಷದ ವಿವಾಹಿತ ಮಹಿಳೆಯ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಪರಿಚಿತ ಶವವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಚೇಳೂರು ಪೊಲೀಸರು ಘಟನಾಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಶವವನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತ ಮಹಿಳೆಯ ಕೊರಳಲ್ಲಿ ತಾಳಿ,ಕಾಲಿನಲ್ಲಿ ಕಾಲುಂಗುರ, ಕೈಯಲ್ಲಿ ಅರೆ ಬೆಂದ ಬಳೆಗಳು ಇದ್ದು ಬೇರೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಕುತ್ತಿಗೆಗೆ ವೇಲು ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಗುರುತು ಸಿಗದಂತೆ ಮಾಡಲು ಕಿಡಿಗೇಡಿಗಳು ಸುಟ್ಟಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ಹಾಗೂ ಶಿರಾ ಡಿ ವೈ ಎಸ್ ಪಿ ಭೇಟಿ ನೀಡಿದ್ದರು. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.