ದಾವಣಗೆರೆ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಛಾವಣಿ ಕುಸಿದು ರೋಗಿಗಳ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ದಾವಣಗೆರೆ ಚಗಟೇರಿ ಜಿಲ್ಲಾಸ್ಪತ್ರೆಯ 71-72 ನೇ ವಾರ್ಡ್ ನಲ್ಲಿ ರೋಗಿಗಳ ಮೇಲೆ ಛಾವಣಿ ಕುಸಿದು ಬಿದ್ದಿದೆ. ರೋಗಿಗಳು ಮಲಗಿದ್ದಾಗ ಏಕಾಏಕಿ ಛಾವಣೆಯ ಸಿಮೆಂಟ್ ಕುಸಿದಿದೆ.
ಘಟನೆಯಿಂದ ರೋಗಿಗಳು ಭಯಭೀತರಾಗಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಮೂಲ ಸೌಲಭ್ಯಗಳಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಆಸ್ಪತ್ರೆಯ ಕಟ್ಟಡವು ಶಿಥೀಲಾವಸ್ಥೆ ತಲುಪಿದೆ. ಜಿಲ್ಲಾಸ್ಪತ್ರೆಯ ವ್ಯವಸ್ಥೆ ಬಗ್ಗೆ ರೋಗಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.