Monday, December 2, 2024
Homeತುಳುನಾಡುತುಳುನಾಡಿನ ಸಾಂಸ್ಕೃತಿಕ ಅನನ್ಯತೆಗೆ ಜೈನ ಅರಸರ ಕೊಡುಗೆ ಅಪೂರ್ವವಾದದ್ದು-ಡಾ. ಪುಂಡಿಕಾಯಿ ಗಣಪಯ್ಯ ಭಟ್ 

ತುಳುನಾಡಿನ ಸಾಂಸ್ಕೃತಿಕ ಅನನ್ಯತೆಗೆ ಜೈನ ಅರಸರ ಕೊಡುಗೆ ಅಪೂರ್ವವಾದದ್ದು-ಡಾ. ಪುಂಡಿಕಾಯಿ ಗಣಪಯ್ಯ ಭಟ್ 

ತುಳುನಾಡಿನ ಸಾಂಸ್ಕೃತಿಕ ಅನನ್ಯತೆಗೆ ಉದಾರವಾದಿ ನಿಲುಮೆಗೆ ಸ್ವಾಭಿಮಾನದ ಚಿಂತನೆಗಳಿಗೆ ಜೈನ ಅರಸರ ಕೊಡುಗೆ ಗಣನೀಯವಾದದ್ದು ಎಂಬುದಾಗಿ ಡಾ. ಪುಂಡಿ ಕಾಯಿ ಗಣಪಯ್ಯ ಭಟ್ ಅಭಿಪ್ರಾಯಪಟ್ಟರು. ಇಂದು ಮೂಡುಬಿದರೆ ಜೈನ್ ಮಿಲನ್ ಆಶ್ರಯದಲ್ಲಿ ಜೈನ ಹೈಸ್ಕೂಲಿನಲ್ಲಿ ನಡೆದ ಮಾಸಿಕ ಸಭೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇವರು ತುಳುನಾಡಿಗೆ ಜೈನ ಅರಸರ ಕೊಡುಗೆಗಳು ಎನ್ನುವ ವಿಚಾರದಲ್ಲಿ ಉಪನ್ಯಾಸವನ್ನು ನೀಡಿದರು. 

ಅಳುಪರ ನಂತರ ಸುಮಾರು ಐದು ಶತಮಾನಗಳಷ್ಟು ದೀರ್ಘಾವಧಿಗೆ ತುಳುನಾಡನ್ನು ಆಳ್ವಿಕೆ ಮಾಡಿದ ಸುಮಾರು 15 ಕಿಂತ ಹೆಚ್ಚು ರಾಜಮನೆತನಗಳು ಬೀಡು ಬಲ್ಲಾಳರು ತುಳುನಾಡಿನ ಸ್ವಾಭಿಮಾನಿ ಅಸ್ಮಿತೆಗೆ ಕಾರಣರಾಗಿದ್ದಾರೆ ಎಂಬುದಾಗಿ ತಿಳಿಸಿದರು ವಿಜಯನಗರ ಹಾಗೂ ಕೆಳಗೆ ಅರಸರೊಂದಿಗೂ ಸಂಘರ್ಷಕ್ಕೆ ಇಳಿದ ಇಲ್ಲಿನ ಅರಸರು ಇಲ್ಲಿಯ ವಿಶಿಷ್ಟ ಸಂಸ್ಕೃತಿಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು ತಮ್ಮೊಳಗೆ ಸಂಘರ್ಷಗಳು ನಡೆಸಿದ್ದರು ರಕ್ತಪಾತವಿಲ್ಲದೆ ಒಪ್ಪಂದದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿದ ಹತ್ತಾರು ಉದಾಹರಣೆಗಳನ್ನ ಜೈನ ಸಂಸ್ಕೃತಿಯ ಹಿನ್ನೆಲೆಯಲ್ಲಿ ಗಮನಿಸಬಹುದು ಹಿಂದೂ ದೇವಾಲಯಗಳ ಸ್ಥಾಪನೆ ಧರ್ಮ ಸಾಮರಸ್ಯದ ಮೂಲಕ ಬಹು ಜನರಿಗೆ.. ಪ್ರಜೆಗಳಿಗೆ ಬೇಕಾದ ರೀತಿಯಲ್ಲಿ ಬದುಕಿ ಬಾಳಿದವರು ಇಲ್ಲಿಯ ಅರಸು ಮನೆತನದವರು ಎಂದು ಉದಾಹರಣೆಗಳ ಮೂಲಕ ವಿವರಿಸಿದರು .

ಸಭೆಯ ಅಧ್ಯಕ್ಷತೆ ವಹಿಸಿದ್ದ ಜೈನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡು ಅವರು ಸುಳ್ಯ ಭಾಗದಲ್ಲಿ ಆಳ್ವಿಕೆ ಮಾಡಿದ ಬಲ್ಲಾಳರ ಮತ್ತು ಉಳಿದಿರುವ ಬಸದಿಗಳ ಕುರುಹುಗಳನ್ನು ರಕ್ಷಿಸುವ ಅಗತ್ಯವನ್ನು ವಿವರಿಸಿದರು .ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ ರಕ್ತಗತವಾಗಿ ಇರುವುದರಿಂದಲೇ  ನೂರಾರು ದೇವಾಲಯಗಳನ್ನು ದೈವಸ್ಥಾನಗಳನ್ನು ಬಸದಿಗಳನ್ನು ನಿರ್ಮಾಣ ಮಾಡುವ ಆಶ್ರಯ ಕೊಡುವ ಪೋಷಕರಾಗಿ ಗುತ್ತು ಬೀಡು ಅರಮನೆಗಳು ಬೆಳೆದು ಬರಲು ಕಾರಣವಾಯಿತು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜೈನ್ ಮಿಲನ್ ಅಧ್ಯಕ್ಷರಾದ ವೀರ್  ಆನಡ್ಕ ದಿನೇಶ್ ಕುಮಾರ್ ಅವರ ಕಲ್ಪನೆಯ ಬೆಳ್ಳಿಯ ಚಿತ್ತಾರ ಸಹಿತದ ಸನ್ಮಾನ ಪತ್ರವನ್ನು ನೀಡಿ ವೀಣಾ ರಘು ಚಂದ್ರ  ಶೆಟ್ಟಿ ಅವರನ್ನು ಅವರ ಸಾಹಿತ್ಯ ಸೇವೆಗಳಿಗಾಗಿ ಸನ್ಮಾನಿಸಲಾಯಿತು .ಕೃಷಿ ವಿಚಾರ ವಿನಿಮಯ ಕೇಂದ್ರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಭಯ್ ಕುಮಾರ್ ಅವರನ್ನು ಗೌರವಿಸಲಾಯಿತು .ಡಾ. ಬಿ.ಪಿ ಸಂಪತ್ ಕುಮಾರ್ ಸ್ವಾಗತಿಸಿ ವೀರ್ ಅನಂತವೀರ ಜೈನ .ವರದಿ ವಾಚಿಸಿ ವಂದಿಸಿದರು ಖಜಾಂಜಿ ವೀರ್ ಪುಷ್ಪರಾಜ್ ಜೈನ್ ಮುಖ್ಯ ಅತಿಥಿಯವರ ಪರಿಚಯ ಮಾಡಿದರು.ವಲಯ ನಿರ್ದೇಶಕರಾದ ವೀರ ಜಯರಾಜ್ ಕಂಬಳಿ ಅತಿಥೇಯರ ಪರವಾಗಿ ಸಂಪತ್ ಸಾಮ್ರಾಜ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು .ಚಿನ್ಮಯಿ ಪ್ರಾರ್ಥನೆ ನೆರವೇರಿಸಿ, ಅಪೇಕ್ಷ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES
- Advertisment -
Google search engine

Most Popular