ಪುತ್ತೂರು: ದೇಶಾದ್ಯಂತ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪುತ್ತೂರಿನಲ್ಲಿ ಹೊಸ ಘಟನೆಯೊಂದು ಬೆಳಕಿಗೆ ಬಂದಿದೆ. ಪುತ್ತೂರಿನ ಪ್ರಸಿದ್ಧ ಮಹಾಲಿಂಗೇಶ್ವರ ದೇವಾಲಯದ ಕಾಣಿಕೆ ಹುಂಡಿ ತೆರೆಯುವ ಸಂದರ್ಭ ಲವ್ ಜಿಹಾದ್ ಬಲೆಗೆ ಬಿದ್ದ ಯುವತಿಯೋರ್ವಳು ದೇವರಿಗೆ ಬರೆದ ಪತ್ರವೊಂದು ಸಿಕ್ಕಿದ್ದು ಹೊಸ ಸಂಚಲನ ಸೃಷ್ಟಿ ಮಾಡಿದೆ.
ಕಾಣಿಕೆ ಹುಂಡಿ ಲೆಕ್ಕಾಚಾರದ ವೇಳೆ ಸಿಕ್ಕಿದ ಚೀಟಿಯಲ್ಲಿ “ಸಮೀರ್ ಅನ್ನುವವನು ನನ್ನ ಜೀವನ ಹಾಳು ಮಾಡಿದ್ದಾನೆ. ಇವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದೇವೆ.. ಅವನ ಜೀವನ ಕೂಡ ಹಾಳಗಬೇಕು ಅವನಿಗೆ ಮದುವೆಯಾಗಲು ಹುಡುಗಿ ಸಿಗಬಾರದು – ಓ ದೇವರೆ ಇದು ನನ್ನ ಪ್ರಾರ್ಥನೆ ” ಎಂದು ಬರೆಯಲಾಗಿದೆ.
ಇತಿಹಾಸ ಪ್ರಸಿದ್ಧವಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಅನೇಕ ಕಾರಣಿಕದ ಸಂಗತಿಯನ್ನು ಒಳಗೊಂಡಿದ್ದು, ಹತ್ತೂರ ಒಡೆಯನಲ್ಲಿ ತಮ್ಮ ಮನದಾಳದ ಮಾತನ್ನು ಚೀಟಿ ಮೂಲಕ ತಿಳಿಸಿದ್ದಾರೆ. ಸದ್ಯ ಈ ಪ್ರಕರಣದ ಮೂಲಕ ಮತ್ತೊಂದು ಲವ್ ಜಿಹಾದ್ ಘಟನೆ ಬೆಳಕಿಗೆ ಬಂದತಾಗಿದೆ. ಈ ಪತ್ರದ ವಿಷಯ ತಿಳಿದು ಪುತ್ತೂರಿನ ಹಿಂದೂ ಸಮಾಜ, ದೇವರೇ ನ್ಯಾಯ ಒದಗಿಸಲಿ ಎಂದು ಮನವಿ ಮಾಡಿದೆ.