Monday, January 13, 2025
Homeದಾವಣಗೆರೆಕನ್ನಡ ನಾಡು ವೈಭವಿ ಕರಣಕ್ಕೆ ಪ್ರಸ್ತುತ ಯುವ ಪೀಳಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸ ಬೇಕಾಗಿದೆ - ಅಣ್ಣಪ್ಪ...

ಕನ್ನಡ ನಾಡು ವೈಭವಿ ಕರಣಕ್ಕೆ ಪ್ರಸ್ತುತ ಯುವ ಪೀಳಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸ ಬೇಕಾಗಿದೆ – ಅಣ್ಣಪ್ಪ ಮೇಟಿಗೌಡ

ದಾವಣಗೆರೆ : ಪರಭಾಷೆಗಳೊಂದಿಗೆ ಕನ್ನಡಕ್ಕೆ ಮೊದಲ ಆದ್ಯತೆಯೊಂದಿಗೆ ಕನ್ನಡ ನಾಡು, ನುಡಿ ವೈಭವೀಕರಣಕ್ಕೆ ಪ್ರಸ್ತುತ ಯುವ ಪೀಳಿಗೆ ಬದ್ದತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಕನ್ನಡ ರಾಜ್ಯೋತ್ಸವ ಕೇವಲ ನವೆಂಬರಿಗೆ ಸೀಮಿತವಾಗದೆ ವರ್ಷ ಪೂರ್ತಿ ನಮ್ಮ ಹೃದಯ ಭಾಷೆ ಕನ್ನಡವನ್ನು ನಿತ್ಯೋತ್ಸವದೊಂದಿಗೆ ಕನ್ನಡ ಕಾಯಕ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ರಾಯಚೂರಿನ ಬೆಳಕು ಸಾಹಿತ್ಯ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ನ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ ತಮ್ಮ ಅನಿಸಿಕೆ ಹಂಚಿಕೊಂಡರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯವತಿಯಿಂದ ನಿನ್ನೆ ದಿನ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಬೆಳಿಗ್ಗೆ 9-30 ರಿಂದ ಕರ್ನಾಟಕದ 69ನೇ ಕನ್ನಡ
ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ “ಕರ್ನಾಟಕ ಮುಕುಟಮಣಿ’ ರಾಜ್ಯ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ದಾವಣಗೆರೆ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ.ವಾಮದೇವಪ್ಪ ಮಾತನಾಡಿ, ಕಳೆದ ವರ್ಷಗಳಿಂದ ವಿಭಿನ್ನ ಹೊಸ ಹೊಸ ಪರಿಕಲ್ಪನೆಯೊಂದಿಗೆ ನಿರಂತರವಾಗಿ ವೈಶಿಷ್ಟ ಪೂರ್ಣವಾಗಿ ನಡೆದು ಬಂದ ಈ ಕಲಾಕುಂಚ ಸಂಸ್ಥೆ ಇತರ ಸಂಘಟನೆಗಳಿಗೆ ಮಾದರಿ. ಈ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ ಶೆಣೈಯವರು ದಾವಣಗೆರೆ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾಗಿರುವ ಇವರಿಗೆ ಕರ್ನಾಟಕ ಸರ್ಕಾರ ರಾಜ್ಯ ಪ್ರಶಸ್ತಿಗೆ ಇಷ್ಟರಲ್ಲಿಯೇ ಆಯ್ಕೆ ಮಾಡಬೇಕಾಗಿತ್ತು 2 ಸಾವಿರ ವರ್ಷಗಳ ಇತಿಹಾಸ ವಿವಿಧ ಈ ನಮ್ಮನ್ನು ನಿಮ್ಮೆಲ್ಲರ ಈ ಕನ್ನಡ ಭಾಷೆ ಕೇವಲ ಸಮಾರಂಭಕ್ಕೆ ಸೀಮಿತವಾಗದೆ ಹೃದಯ ಭಾಷೆಯಾಗಿ
ಅಳವಡಿಸಿಬೇಕಾಗಿದೆ ಎಂದರು
“ಕಾಣದ ಕಡಲಿಗೆ”ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಿದ ಯುವ ಸಾಹಿತಿಗಳಾದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ,ಯ ರಾಜ್ಯ ಸಮಿತಿ ಸಂಸ್ಥಾಪಕರಾದ ಗಿರಿಜಾ ಮಾಲಿ ಪಾಟೀಲ್ ಮಾತನಾಡಿ, ನಮ್ಮ ಸಾಹಿತ್ಯ, ಹಿಂದಿನ ಪರಂಪರೆಯ ಪಂಪ, ರನ್ನ, ಜನ್ನ ಮುಂತಾದವರ ಹಳೇ ಕನ್ನಡದ ಕವನ ಈಗ ಹೊಸಕನ್ನಡದ ಪ್ರಸ್ತುತಿ ಈಗಿನ ಯುವ ಕವಿ,ಕವಯತ್ರಿಯರು ಅನುಸರಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಬೀದರ್‌ನ ವಿಶ್ವ ಕನ್ನಡಿಗರ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ. ಸುಬ್ಬಣ್ಣ ಕರಕನಹಳ್ಳಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಯುವ ಸಾಹಿತಿ, ಕವಯತ್ರಿ ಡಾ. ಶ್ರೀದೇವಿ ಸೂರ್ಯಕಾಂತ ಸುವರ್ಣಖಂಡಿ, ಶಿವಮೊಗ್ಗ ಜಿಲ್ಲೆಯ ಸಾಗರದ ಸಂಪದ ಸಾಲು ಪತ್ರಿಕೆಯ ಸಂಪಾದಕರಾದ ವೆಂಕಟೇಶ ಎಸ್. ಸಂಪ, ಯುವ ಸಾಹಿತಿ ಕಲಬುರ್ಗಿಯ ಮಲ್ಲಿಕಾರ್ಜುನ ಎಸ್. ಆಲಮೇಲ, ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ಮಾತನಾಡಿ,ಪ್ರಶಸ್ತಿ ಪುರಸ್ಕೃತರಿಗೆ ಶುಭ ಕೋರಿ, ಅಭಿನಂದನೆ ಸಲ್ಲಿಸಿದರು. 187 ಸಾಧಕರಿಗೆ ಕಲಾಕುಂಚ ಮುತೈದೆಯರು ಕನ್ನಡ ಕಂಕಣ ಕಟ್ಟಿ,
ಕನ್ನಡ ತಿಲಕವಿಟ್ಟು, ಕನ್ನಡಾರತಿ ಬೆಳಗಿ, ಪುಷ್ಪವೃಷ್ಠಿಯೊಂದಿಗೆ ಸ್ವಾಗತಿಸಿ, ವೇದಿಕೆಯಲ್ಲಿ ಪ್ರತ್ಯೇಕವಾದ ಸಿಂಹಾಸನದಲ್ಲಿ ಕೂರಿಸಿ ಕನ್ನಡ ಪೇಟದೊಂದಿಗೆ ಅವರದೇ ಭಾವಚಿತ್ರವಿರುವ ಸನ್ಮಾನಪತ್ರ, ಹಾರ, ಶಾಲು ಹಾಕಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಭ ರವೀಂದ್ರರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಚಂದ್ರಶೇಖರ ಅಡಿಗ ಸ್ವಾಗತಿಸಿದರು, ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಯವರು ಪ್ರಸ್ತಾವಿಕವಾಗಿ ಮಾತನಾಡಿ, ನವ ಯುವಕವಿ ಕವಿಯತ್ರಿಯರಿಗೆ ಸಾಧಕರಿಗೆ ವೇದಿಕೆಗಳನ್ನು ಕಲ್ಪಿಸುವ ಹೊಸ ಪರಕಲ್ಪನೆ ಈ ನಮ್ಮ ಸಂಸ್ಥೆಯ ಸದುದ್ದೇಶ ಎಂದರು. ಕೊನೆಯಲ್ಲಿ ಸಾಹಿತಿ ಕವಿಯತ್ರಿ ನಾಗರತ್ನ ವಂದಿಸಿದರು, ಶೈಲಾ ವಿನೋದ್ ದೇವರಾಜ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

RELATED ARTICLES
- Advertisment -
Google search engine

Most Popular