ಬ್ರಹ್ಮಾವರ : ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮೂಡುತೋನ್ಸೆ ಗ್ರಾಮದ ಮುಹಮ್ಮದ್ ಫೈಝಲ್(36) ಎಂಬವರ ಮೃತದೇಹವು ಮಾ.29ರಂದು ಮಧ್ಯಾಹ್ನ ಉಪೂರು ಮಾಯಾಡಿ ಎಂಬಲ್ಲಿರುವ ಸುವರ್ಣ ನದಿಯಲ್ಲಿ ಪತ್ತೆಯಾಗಿದೆ.
ರಿಕ್ಷಾ ಚಾಲಕ ವೃತ್ತಿ ಹಾಗೂ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಇವರು ಮಾ.27ರಂದು ರಾತ್ರಿ ಮನೆಯಿಂದ ರಿಕ್ಷಾದಲ್ಲಿ ಹೋಗಿದ್ದರು. ಬಳಿಕ ಹುಡು ಕಾಡಿದಾಗ ಮನೆ ಬಳಿಯ ಮೈದಾನದ ಸಮೀಪ ಇವರ ರಿಕ್ಷಾ ಪತ್ತೆಯಾಗಿತ್ತು. ಆದರೆ ಮುಹಮ್ಮದ್ ಫೈಝಲ್ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮಲ್ಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.