ಹುಣಸಗಿ :ಹುಣಸಗಿ-ನಾರಾಯಣಪುರ ರಾಜ್ಯ ಹೆದ್ದಾರಿಯ 155 ರಸ್ತೆಯ ಮೇಲೆ ಕುಳಿತು ಬೆಳಗಿನ ಹೊತ್ತು ಯೋಗಾಭ್ಯಾಸದಲ್ಲಿ ತೊಡಗಿದ್ದ ಮೂರು ಜನ ಮಹಿಳೆಯರ ಮೇಲೆ ನಸುಕಿನಲ್ಲಿ ಎದುರಿಗೆ ಬಂದ ವಾಹನದ ಲೈಟ್ ನ ರಭಸದ ಪರಿಣಾಮ ಹುಣಸಗಿ ಕಡೆಯಿಂದ ಬಂದ ಒಂದು ಬೈಕ್ ಗುದ್ದಿದ್ದರ ಪರಿಣಾಮ ಲಕ್ಷ್ಮಿ ಸಿದ್ದಪ್ಪ ಮಾಳಿ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಮಹಿಳೆ ಮಲ್ಲಮ್ಮ ಬಸಪ್ಪ ಹುನೂರ(52) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವಿಗೀಡಾಗಿದ್ದರೆ. ಇವರ ಜೊತೆ ಇನ್ನೋರ್ವ ಮಹಿಳೆ ಈ ಘಟನೆಯ ಮುನ್ಸೂಚನೆ ನೋಡಿ ಪಾರಾಗಿದ್ದಾಳೆ. ಹುಣಸಗಿ ತಾಲ್ಲೂಕಿನ ನಾರಾಯಣಪುರ ಹೋಗುವ ರಸ್ತೆ ಕಾಮನಟಗಿ ಗ್ರಾಮದ ಬಳಿ ಇಂದು ಬೆಳಿಗ್ಗೆ ದುರಂತ ನಡೆದಿದೆ. MH09 BU5042 ಬೈಕ ಹಾಗೂ ಬೈಕ ಸಾವರನ ಮೇಲೆ ಹುಣಸಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರು ಯಾವುದೇ ರಸ್ತೆಯ ಮೇಲೆ ಯೋಗ ವ್ಯಾಯಾಮ ಮಾಡದಂತೆ ಹುಣಸಗಿ ಪೋಲಿಸ್ ಇಲಾಖೆ ಹಾಗೂ ಹುಣಸಗಿ ತಾಲ್ಲೂಕು ಆಡಳಿತ ಜನರಿಗೂ ತಿಳಿವಳಿಕೆ ನೀಡಿದಾಗ ಮಾತ್ರ ಇಂತ ರಸ್ತೆ ಅಪಘಾತಗಳು ಸಂಭವಿಲು ಸಾಧ್ಯವಿಲ್ಲ.
ಅಮರೇಶಣ್ಣ ಕಾಮನಕೇರಿ ರಾಜ್ಯಾಧ್ಯಕ್ಷರು
ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ (ರಿ)