ಶ್ರೀ ನಡಿಯೇಳು ದೈವಗಳು ಶ್ರೀ ಉಳ್ಳಾಲ್ದ ಶ್ರೀ ನಾಲ್ಕೈಥಾಯ ಹಾಗೂ ಪರಿವಾರ ದೈವಗಳ ಕ್ಷೇತ್ರ ಮಿತ್ತ ಮಜಲು ಇದರ ನೂತನವಾಗಿ ನಿರ್ಮಾಣಗೊಂಡ ಮೂರು ಗೋಪುರಗಳ ಲೋಕಾರ್ಪಣೆ ಹಾಗೂ ಸಾನಿಧ್ಯ ಕಲಶಾಧಿ ಕಾರ್ಯಕ್ರಮ ಏಪ್ರಿಲ್ ಎರಡು ಬುಧವಾರ ಹಾಗೂ ಎಪ್ರಿಲ್ ಮೂರು ಗುರುವಾರ ಬ್ರಹ್ಮಶ್ರೀ ನೀಲೇಶ್ವರ ಕೆ. ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.
ಇದರ ಆಮಂತ್ರಣ ಪತ್ರವನ್ನು ಭಾನುವಾರದಂದು ಸಜೀಪ ಮಾಗಣೆ ಭಂಡಾರದ ಮನೆ ಶ್ರೀ ಉಳ್ಳಾಲ್ದ ಕ್ಷೇತ್ರದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಪ್ರಾರ್ಥಿಸಿ ಬಿಡುಗಡೆ ಗೊಳಿಸಿದರು ಕ್ಷೇತ್ರದ ನವನಿರ್ಮಾಣ ರೂವಾರಿ ವಿವೇಕ್ ಶೆಟ್ಟಿ ನಗ್ರಿಗುತ್ತು. ಎಸ್ ಶ್ರೀಕಾಂತ್ ಶೆಟ್ಟಿ ಸಂಕೇಶ. ದೇವಿ ಪ್ರಸಾದ್ ಪೂoಜ. ಶಿವಪ್ರಸಾದ್ ಶೆಟ್ಟಿ .ಜೀವನ್ ಆಳ್ವ.