ಗ್ರಾಮೀಣ ಜನರ ಸಬಲೀಕರಣವೇ ವಿಕಸಿತ ಭಾರತದ ನಿಜವಾದ ಅಡಿಪಾಯ

0
26

ಕಾಯ್ಕಿಣಿ ಪಂಚಾಯತ್ ನಲ್ಲಿ ಯಶಸ್ವಿ ಕಂಡ VB G RAM G ಮಾಹಿತಿ ಕಾರ್ಯಾಗಾರ
ಭಟ್ಕಳ: ಪ್ರತಿಯೊಂದು ಗ್ರಾಮದಲ್ಲಿ ಉದ್ಯೋಗ, ಪ್ರತಿಯೊಂದು ಕುಟುಂಬದಲ್ಲಿ ಆದಾಯ ಭದ್ರತೆ, ಪ್ರತಿಯೊಂದು ಹೊಲಕ್ಕೆ ನೀರು,ಪ್ರತಿಯೊಂದು ಗ್ರಾಮದಲ್ಲಿ ಉತ್ತಮ ಮೂಲಸೌಕರ್ಯ,ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲಿ ಗೌರವಇವುಗಳ ಸಮನ್ವಯವೇ ನಿಜವಾದ ಅಭಿವೃದ್ಧಿ ಇದು VB G RAM G ಯೋಜನೆಯಿಂದ ಮಾತ್ರ ಸಾಧ್ಯ ಎಂದು ಕಾಯ್ಕಿಣಿ ಪಂಚಾಯತ್ ಆಡಳಿತಾಧಿಕಾರಿ ಹಾಗೂ ತಾಪಂ ಭಟ್ಕಳ ಇದರ ಲೆಕ್ಕಾದಿಕಾರಿ ರಾಜೇಶ ಮಹಾಲೆ ನುಡಿದರು.
ಅವರು ಇಂದು ಬುದುವಾರ ಪಂಚಾಯತ್ ಸಭಾಭವನದಲ್ಲಿ ನಡೆದ VB G RAM G ಮಾಹಿತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ಲಿ ಭಾಗವಹಿಸಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಹಾಜರಿದ್ದ ಅಭಿವೃದ್ಧಿ ಅಧಿಕಾರಿ ನಾಗರಾಜ ಮಾತನಾಡಿ VB–G RAM–Gಯ ಮಹತ್ವ ಉದ್ಯೋಗವನ್ನು ಅಭಿವೃದ್ಧಿಯೊಂದಿಗೆ ಜೋಡಿಸುವ ಪ್ರಯತ್ನವಾಗಿದೆ. ಹಾಗಾಗಿ ಜನ ಸಮುದಾಯ ಕೈ ಜೋಡಿದುವ ಅಗತ್ಯ ಇದೆ ಆಗ ಮಾತ್ರ ಯೋಜನೆ ಸನಸಮುದಾಯಕ್ಕೆ ತಲುಪಲು ಸಾಧ್ಯ ಎಂದರು.
ಈ ಸಂಧರ್ಭದಲ್ಲಿ ಮುಖ್ಯ ಅತಿಥಿಯಾಗಿ ಹಾಜರಿದ್ದ ಸಾಮಾಜಿಕ ಪರಿಶೋಧನಾ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ಮಾತನಾಡಿ VB G RAM G ಇದು ಕೆಲಸ ಕೊಡುವ ಯೋಜನೆ’*ಯಾಗಿ ಉಳಿಯದೆ, *‘ಕೆಲಸದ ಮೂಲಕ ಗ್ರಾಮ ನಿರ್ಮಾಣ ಮಾಡುವ ಯೋಜನೆ’**ಯಾಗಿದೆ ಎಂದರು. ಇಲ್ಲಿ ಪಾರದರ್ಶಕತೆ ಸಾದಿಸುವಲ್ಲಿ ಸಾಮಾಜಿಕ ಪರಿಶೋದನೆ ಮುಖ್ಯ ಪಾತ್ರೆ ವಹಿಸುತ್ತದೆ ಎಂದರು.
ಮೊದಲಿಗೆ ಪಂಚಾಯತ್ ಕಾರ್ಯದರ್ಶಿ ಈರಪ್ಪ ಬೇವಿನಗಿಡ ಎಲ್ಲರನ್ನು ಸ್ವಾಗತಿಸಿದರು. ವಿಷ್ಣು ನಾಯ್ಕ ವಂದಿಸಿದರು. ಪಂಚಾಯತ್ ಸಿಬಂದಿಗಳಾದ ನಾಗವೇಣಿ ನಾಯ್ಕ ಶ್ರಿನಿವಾಸ ನಾಯ್ಕ ಈಶ್ವರ ನಾಯ್ಕ ,ಕೇಶವ ನಾಯ್ಕ, ಸುಮ ನಾಯ್ಕ ಸಹಕರಿಸಿದರು. ಗ್ರಾಮಸಂಪನ್ಮೂಲ ವ್ಯಕ್ತಿಗಳಾದ ಯಮುನಾ ನಾಯ್ಕ ಶಿಲ್ಪಾ ನಾಯ್ಕ ಹಾಜರಿದ್ದರು.ಯಶಸ್ವಿ ಯಾಗಿ ನಡೆದ ಕಾರ್ಯಾಗಾರದಲ್ಲಿ ನೂರಕ್ಕೂ ಅದಿಕ ಜನರು ಭಾಗವಹಿಸಿದ್ದರು.