ಕರ್ನಾಟಕದ ಹಿಂದುತ್ವದ ಫ್ಯಾಕ್ಟರಿ ಎಂದೇ ಖ್ಯಾತಿಯನ್ನ ಪಡೆದಿರುವ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಇಂತಹ ಅವಳಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಂತ ಅತ್ಯಾಚಾರ ಖಂಡನೀಯವಾಗಿದೆ ಇದಕ್ಕೆ ಬಜರಂಗದಳ ಉತ್ತರವನ್ನ ನೀಡಲು ಸಿದ್ದವಾಗಿದೆ. ಉಡುಪಿ ಜಿಲ್ಲೆಯಲ್ಲಿ ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಕಂಡು ಬಂದರೆ ಬಜರಂಗದಳ ಕಾರ್ಯಕರ್ತರು ನೇರ ಹೋರಾಟವನ್ನು ಮಾಡಲಿದ್ದಾರೆ. ಈ ಹ್ಯೇಯ ಕೃತ್ಯವನ್ನು ಇಡೀ ಹಿಂದೂ ಸಮಾಜ ಪ್ರತಿಭತಟಿಸಬೇಕಾದ ಅವಶ್ಯಕತೆ ಬಂದಿದೆ.ಹಾಗಾಗಿ ನಾವೆಲ್ಲ ಒಟ್ಟಾಗಿ ಸೋಮವಾರದಂದು ಪ್ರತಿಭಟನಾ ಸಭೆಯಲ್ಲಿ ಕಾರ್ಕಳದ ಎಲ್ಲಾ ಹಿಂದೂ ಬಾಂಧವರು ಕಡ್ಡಾಯವಾಗಿ ಪಾಲ್ಗೊಳ್ಳಬೇಕಾಗಿ ಬಜರಂಗದಳ ಉಡುಪಿ ಜಿಲ್ಲೆಯ ವತಿಯಿಂದ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಬಜರಂಗದಳ ಉಡುಪಿ ಜಿಲ್ಲಾ ಸಂಯೋಜಕ ಚೇತನ್ ಪೇರಲ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ