Wednesday, January 15, 2025
HomeUncategorizedಬಹು ನಿರೀಕ್ಷೆಯ 'ಫಾದರ್' ಕೊಂಕಣಿ ಚಲನ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ

ಬಹು ನಿರೀಕ್ಷೆಯ ‘ಫಾದರ್’ ಕೊಂಕಣಿ ಚಲನ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ


ಕೊಮಿಡಿ ಕಂಪೆನಿ ಕ್ರಿಯೇಶನ್ಸ್ ಅರ್ಪಿಸುವ, ನೆಲ್ಲು ಪೆರ್ಮನ್ನೂರ್ ನಿರ್ದೇಶನದ ಬಹುನಿರೀಕ್ಷಿತ ‘ಫಾದರ್’ ಕೊಂಕಣಿ ಚಲನಚಿತ್ರದ ಮೊದಲ ಪೋಸ್ಟರ್ ನಗರದ ಖ್ಯಾತ ಉದ್ಯಮಿ CA ಓಲ್ವಿನ್ ರೊಡ್ರಿಗಸ್ ರವರು ಮಂಗಳೂರಿನ ಸೈಂಟ್ ಆಗ್ನೆಸ್ ಸ್ಪೆಷಲ್ ಸ್ಕೂಲ್ ಮೈದಾನದಲ್ಲಿ ಆದಿತ್ಯವಾರ 15-12-2024 ರಂದು ನಡೆದ ‘ಕುಡ್ಲ ಕಾರ್ನಿವಲ್’ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು.
‘ಕೊಂಬ್ಯಾಟ್’ ಚಿತ್ರ ನಿರ್ಮಿಸಿದ ತಂಡದಿಂದ ನಿರ್ಮಾಣಗೊಳ್ಳುವ ‘ಫಾದರ್’ ಚಲನಚಿತ್ರದ ಮೇಲೆ ಜನರಿಗೆ ಬಹಳಷ್ಟು ನಿರೀಕ್ಷೆಯಿದೆ, ಸಿನಿಮಾ ಖಂಡಿತವಾಗಿಯೂ ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣಗಳಿವೆ ಎಂದು ತಮ್ಮ ಹಿತನುಡಿಗಳಲ್ಲಿ ಸಿಎ ಓಲ್ವಿನ್ ರೊಡ್ರಿಗಸ್ ರವರು ತಿಳಿಸಿದರು.
ಅತಿಥಿಗಳಾಗಿ ರೋ ಇಂಟರ್ನ್ಯಾಷನಲ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ  ರೋಹನ್ ಪಿರೇರಾ, ‘ಅಸ್ಮಿತಾಯ್’ ಚಿತ್ರದ ನಟಿ ಸುಪರ್ ಮೋಡೆಲ್ ವೆನ್ಸಿಟಾ ಡಾಯಸ್, ಕೊಂಕಣಿ ನಾಟಕ್ ಸಭಾ’ದ ಉಪಾಧ್ಯಕ್ಷರಾದ ಶ್ರೀಯುತ ಲಿಸ್ಟನ್ ಡಿಸೋಜ ಬಜಾಲ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀಯುತ ನವೀನ್ ಲೋಬೊ ಬಜಾಲ್, ಕಥೊಲಿಕ್ ಸಭಾ ಬಜಾಲ್ ಘಟಕದ ಅಧ್ಯಕ್ಷರಾದ ಶ್ರೀಯುತ ರೊನಾಲ್ಡ್ ಕುವೆಲ್ಲೊ, ಶ್ರೀಯುತ ಅಶಿತ್ ಪಿಂಟೊ ದುಬಾಯ್,
ನಿರ್ದೇಶಕ ನೆಲ್ಲು ಪೆರ್ಮನ್ನೂರ್, ಸಂಕಲನಕಾರ ರವೀನ್ ಮಾರ್ಟಿಸ್, ಛಾಯಾಗ್ರಾಹಕ ಡೇನಲ್ ಜೇಸನ್, ಪ್ರೊಡಕ್ಷನ್ಸ್ ಮ್ಯಾನೇಜರ್ ಮರಿಯಾ ಜೊಯ್ಸ್, ಕಲಾ ನಿರ್ದೇಶಕ ಜೋಸೆಫ್ ಮೊಂತೇರೊ, ವಸ್ತ್ರ ವಿನ್ಯಾಸಕಾರ ಡೇನಿಸ್ ಮೊಂತೇರೊ ಉಪಸ್ಥಿತರಿದ್ದರು. ಆಲ್ವಿನ್ ದಾಂತಿ ಪೆರ್ನಾಲ್ ಕಾರ್ಯಕ್ರಮ ನಿರೂಪಿಸಿದರು.
ಡಿಸೆಂಬರ್ 25 ರಂದು ಚಿತ್ರದ ಟೀಸರ್ ಬಿಡುಗಡೆಗೊಳ್ಳಲಿದೆ. 2025 ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರವು ತೆರೆ ಕಾಣಲಿದೆ. 

RELATED ARTICLES
- Advertisment -
Google search engine

Most Popular