Wednesday, January 15, 2025
Homeಮಂಗಳೂರುಪೆರ್ನಾಜೆಯಲ್ಲಿ ಸತತ ಮೂರು ದಿನಗಳಿಂದ ಬೀಡು ಬಿಟ್ಟ ಕಾಡಾನೆ..!

ಪೆರ್ನಾಜೆಯಲ್ಲಿ ಸತತ ಮೂರು ದಿನಗಳಿಂದ ಬೀಡು ಬಿಟ್ಟ ಕಾಡಾನೆ..!

ಪೆರ್ನಾಜೆ: ಕೃಷಿಗೆ ಒಂದೆಡೆ ಕಾಡುಪ್ರಾಣಿಗಳ ಹಾವಳಿ ಯಾದರೆ ಮಳೆಯ ಚೆಲ್ಲಾಟ
ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಎಂಬಲ್ಲಿ ಕಾಸರಗೋಡಿನ ಪರಪೆಯಿಂದ ಮುಗೇರು ಯರು ಸುಳ್ಯ ತಾಲೂಕು ಕನಕಮಜಲು ರಕ್ಷಿತಾ ಅರಣ್ಯದಿಂದ ಕೂಡಿದ್ದು ಈಗಾಗಲೇ ಹಲವು ಬಾರಿ ಕುಮಾರ ಪೆರ್ನಾಜೆ ಮೂರು ದಿನಗಳಿಂದ ಗಜರಾಜ ಬಾಳೆ ತೋಟವನ್ನು ಚಿದ್ರಗೊಳಿಸುತ್ತಿದ್ದು 25ಕ್ಕೂ ಮಿಕ್ಕಿ ಬಾಳೆ ಗಿಡಗಳನ್ನು ನಾಶ ಮಾಡಿದ್ದು ಅಡಿಕೆ ಗಿಡವು ಬಹಳಷ್ಟು ಹಾನಿಯಾಗಿದೆ .
ಕೃಷಿಕರನ್ನು ಕಾಡಾನೆ ಹೈರಾಣ ಮಾಡಿಸುತ್ತಿದ್ದು. ಅಲ್ಲದೆ ಇದಕ್ಕೆಲ್ಲ ಸರಕಾರ ಸೂಕ್ತ ಪರಿಹಾರ ನೀಡುವುದು ಮಾತ್ರವಲ್ಲದೆ ಕಾಡಾನೆಗಳನ್ನು ಇಲ್ಲಿಂದ ತೆರವು ಮಾಡುವ ಕಾರ್ಯ ಆಗಬೇಕಾಗಿ ಊರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಇಷ್ಟು ವರ್ಷಗಳಿಂದ ಎಲ್ಲೂ ಇಲ್ಲದ ಆನೆಗಳು ಇದೀಗ ಎಲ್ಲೆಡೆ ರಾಜಾರೋಶವಾಗಿ ಹೇಗೆ ತುಂಬಿತು. ಎಂಬುದೇ ಎಲ್ಲರ ಯಕ್ಷಪ್ರಶ್ನೆಯಾಗಿದೆ.
ಒಂದೆಡೆ ಕೂಲಿ ಆಳುಗಳ ಸಮಸ್ಯೆ ಇನ್ನೊಂದೆಡೆ ಅಡಿಕೆಗೆ ಎಲೆ ಚುಕ್ಕಿ ರೋಗ ಮತ್ತೊಂದೆಡೆ ಅಡಿಕೆಗೆ ಕ್ಯಾನ್ಸರ್ ಕಾರಕ ವರದಿಯಿಂದ ಕಂಗೆಟ್ಟ ರೈತ.
ಪ್ರಕೃತಿಯ ಮುನಿಸು ಎಲ್ಲವನ್ನು ರೈತ ನಿಭಾಯಿಸಬೇಕಾಗಿದೆ.

ವರದಿ: ಕುಮಾರ್‌ ಪೆರ್ನಾಜೆ

RELATED ARTICLES
- Advertisment -
Google search engine

Most Popular