26.6 C
Udupi
Tuesday, November 29, 2022
spot_img

ದಿ ಗ್ರೇಟ್ ಮರಾಠಾ ಟ್ರೋಫಿ 2022 ಸಂಪನ್ನ

ಕಾರ್ಕಳದ ಸ್ವರಾಜ್ಯ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ಆರ್ಯ ಕ್ಷತ್ರಿಯ ಮರಾಠ ಸಮಾಜ ಬಾಂಧವರಿಗಾಗಿ ನಡೆದ ದಿ ಗ್ರೇಟ್ ಮರಾಠಾ ಟ್ರೋಫಿ 2022 ಭಾನುವಾರ ಸಾಯಂಕಾಲ ಸಂಪನ್ನಗೊಂಡಿತು. ಅತ್ಯಂತ ಯಶಸ್ವಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ,ಶಿವಮೊಗ್ಗ ಜಿಲ್ಲೆಗಳಿಂದ ಬಂದ ಸುಮಾರು ಸಾವಿರಕ್ಕೂ ಮಿಕ್ಕಿದ ಕ್ರೀಡಾಳುಗಳು, ಸಮಾಜ ಬಾಂಧವರು ಭಾಗವಹಿಸಿದ್ದರು. ಶನಿವಾರ ಬೆಳಿಗ್ಗೆ ಸಚಿವ ವಿ ಸುನೀಲ್ ಕುಮಾರ್ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.ಭಾನುವಾರ ಸಾಯಂಕಾಲ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿತು. ಸಭೆಯಲ್ಲಿ ಭಾಗವಹಿಸಿದ್ದ ಕೆ ಕೆ ಎಂ ಪಿ (ರಿ) ಬೆಂಗಳೂರು ಇದರ ಉಪಾಧ್ಯಕ್ಷ ನಾಗೇಶ್ ರಾವ್ ವನ್ಸೆ ,ಇದೇ ತರಹದ ಟೂರ್ನಮೆಂಟ್ ನ್ನು ರಾಜ್ಯ ಮಟ್ಟದಲ್ಲಿ ನಡೆಸುವ ಇಚ್ಚೆ ವ್ಯಕ್ತಪಡಿಸಿದರು. ನ್ಯಾಯವಾದಿ ರವೀಂದ್ರ ಮೊಯಿಲಿ, ಪುರಸಭಾ ಸದಸ್ಯ ಅಶ್ಫಾಕ್ ಅಹಮದ್,ಹರಿಶ್ಚಂದ್ರ ರಾವ್, ಹರೀಶ್ ಲಾಡ್, ಪದ್ಮನಾಭ ಜಾಧವ್, ರಮಾನಾಥ್ ರಾವ್ , ವಾಮನ್ ಮುಳ್ಳಂಗೋಡು, ಮಧ್ವೇಶ್, ಉಪಸ್ಥಿತರಿದ್ದರು. ಸಮಾಜದ ಪ್ರಮುಖರಾದ ಉಮೇಶ್ ರಾವ್ ಬಜಗೋಳಿ, ಕೀರ್ತನ್ ಕುಮಾರ್, ಚಿರಾಗ್ ರಾವ್, ಪ್ರಕಾಶ್ ರಾವ್, ಸಂತೋಷ್ ರಾವ್ , ಧೀರಜ್ , ಸುಧಾಕರ್ ರಾವ್, ಸತೀಶ್ ರಾವ್, ಪಲ್ಲವಿ, ಜಯಂತಿ, ಸುಮತಿ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದ ಅಚ್ಚುಕಟ್ಟುತನ, ವ್ಯವಸ್ಥೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ದಿ ಗ್ರೇಟ್ ಮರಾಠ ಟ್ರೋಫಿಯ ಫಲಿತಾಂಶ ಹೀಗಿದೆ:

ಪುರುಷರ ಕ್ರಿಕೆಟ್:
ಶ್ರೀ ದೇವಿ ಕ್ರಿಕೆಟರ್ಸ್ , ಭದ್ರಾವತಿ – ಪ್ರಥಮ
ಮಲ್ನಾಡ್ ಮರಾಠಾಸ್ , ಕೊಪ್ಪ- ದ್ವಿತೀಯ
ಮ್ಯಾನ್ ಆಫ್ ದ ಸೀರೀಸ್ – ವಿಶ್ವನಾಥ್, ಮಲ್ನಾಡ್ ಮರಾಠಾಸ್

ಮಹಿಳೆಯರ ಕ್ರಿಕೆಟ್
ಕ್ವೀನ್ಸ್ 11 ಕುಡ್ಲ – ಪ್ರಥಮ
ವೀರ್ ಶಿವಾಜಿ ಆದೂರು – ದ್ವಿತೀಯ
ವುಮನ್ ಆಫ್ ದ ಸೀರಿಸ್- ಗೀತಾ, ಕ್ವೀನ್ಸ್ ಕುಡ್ಲ 11.
ಮಹಿಳೆಯರ ತ್ರೋಬಾಲ್

ಛತ್ರಪತಿ ಪಡೀಲ್ – ಪ್ರಥಮ
ಮೂಕಾಂಬಿಕಾ ಮುಂಡೋಡು ದ್ವಿತೀಯ
ಬೆಸ್ಟ್ ಆಲ್ ರೌಂಡರ್ – ವೈಷ್ಣವಿ, ಮೂಕಾಂಬಿಕ ಮುಂಡೋಡು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles