ಮುಲ್ಕಿ: ನಡಿಕುದ್ರು ಗ್ರಾಮದ ಗುರಿಕಾರ ದಿ. ಸೋಮಸುಂದರ್ ಅಂಚನ್ ರವರಿಗೆ ಸಾರ್ವಜನಿಕ “ನುಡಿ ನಮನ”ಸಭೆ ಮುಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ ಮಾತನಾಡಿ ದಿ ಸೋಮಸುಂದರವರು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರಕ್ಕೆ ಬಹಳಷ್ಟು ಶ್ರಮಿಸಿದ್ದರು,ಸರಳ ಸಜ್ಜನಿಕೆಯ ನೇರ ನಡೆ-ನುಡಿಯ ವ್ಯಕ್ತಿಯಾಗಿದ್ದರು. ಅವರ ಆದರ್ಶಗಳು ಯುವ ಜನಾಂಗಕ್ಕೆ ಮಾದರಿ ಎಂದರು.
ಸಭೆಯಲ್ಲಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ನಿವೃತ್ತ ಪ್ರಾಂಶುಪಾಲ ಸ್ಯಾಮ್ ಮಾಬೆನ್, ಬಾಲಚಂದ್ರ ಸನಿಲ್, ಅಯ್ಯಪ್ಪ ಸೇವಾ ಗಿರೀಶ್ ಫಲಿಮಾರ್ , ವಾಸು ಪೂಜಾರಿ ಚಿತ್ರಾಪು ನಿವೃತ್ತ ಪೊಲೀಸ್ ಅಧಿಕಾರಿ ಕೆ ಎನ್ ಕೋಟ್ಯಾನ್, ನಡಿಕುದ್ರು ಶ್ರೀ ಜಾರಂದಾಯ ದೈವಸ್ಥಾನದ ಗುರಿಕಾರ ವಾಮನ್ ಕೋಟ್ಯಾನ್, ನಡಿಕುದ್ರು ಮತ್ತಿತರರು ಮಾತನಾಡಿದರು. ಸಭೆಯಲ್ಲಿ ಉದ್ಯಮಿ ಅವಿನಾಶ್ ಕೋಟ್ಯಾನ್, ರಮೇಶ್ ಅಮೀನ್ ಕೊಕ್ಕರಕಲ್, ಪುರುಷೋತ್ತಮರಾವ್ ಬಡಗುಹಿತ್ಲು, ನಿರಂಜನ್ ಪೂಜಾರಿ ನಡಿಕುದ್ರು, ಉಮೇಶ್ ನಡಿಕುದ್ರು, ರಾಮನಾಥ್ ಸುವರ್ಣ ಕೊಳಚಿ ಕಂಬಳ ಹಾಗೂ ದಿ. ಸೋಮ ಸುಂದರ್ ರವರ ಕುಟುಂಬಸ್ಥರು ಉಪಸ್ಥಿತರಿದ್ದರು.
ಕೊಳಚಿ ಕಂಬಳದ ಗುರಿಕಾರ ಡಾ. ಹರಿಶ್ಚಂದ್ರ ಪಿ.ಸಾಲ್ಯಾನ್ ನಿರೂಪಿಸಿದರು. ಬಳಿಕ ಮೌನ ಪ್ರಾರ್ಥನೆ ಹಾಗೂ ದಿ.ಸೋಮಸುಂದರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.