ಸ್ವಿಜರ್ಲೆಂಡ್: ಮಾಜಿ ಮಿಸ್ ಸ್ವಿಜರ್ಲೆಂಡ್ ನ ಫೈನಲಿಸ್ಟ್ ಆಗಿದ್ದ ಕ್ರಿಸ್ಟಿನಾ ಜೋಕ್ಸಿಮೊವಿಕ್ ಅವರನ್ನು ಆಕೆಯ ಪತಿ ಥಾಮಸ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದು, ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಫೆ. 13 ರಂದು ಆಕೆಯನ್ನು ಕತ್ತು ಹಿಸುಕಿ ಕೊಂದು ಬಳಿಕ ಬ್ಲೆಂಡರ್ ಮೂಲಕ ಆಕೆಯ ದೇಹವನ್ನು ಕತ್ತರಿಸಿ ಯಾರಿಗೂ ಗೊತ್ತಾಗಬಾರದೆಂದು ಆಸಿಡ್ ನಲ್ಲಿ ಕರಗಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾನೆ.
ಕ್ರಿಸ್ಟಿನಾ ಜೋಕ್ಸಿಮೊವಿಕ್ (38), ಫೆಬ್ರವರಿಯಲ್ಲಿ ಸ್ವಿಟ್ಜರ್ಲೆಂಡ್‌ನ ಬಾಸೆಲ್ ನಗರದ ಬಿನ್ನಿಂಗೆನ್‌ನಲ್ಲಿರುವ ತನ್ನ ಮನೆಯಲ್ಲಿ ಗಂಡ ಥಾಮಸ್ ಕತ್ತು ಹಿಸುಕಿ ಕೊಂದಿದ್ದಾನೆಂದು ವರದಿಯಾಗಿದೆ. ಮೂಲಗಳ ಪ್ರಕಾರ, ಕಳೆದ ಕೆಲ ವರ್ಷಗಳಿಂದ ಕ್ರಿಸ್ಟಿನಾ ಹಾಗೂ ಥಾಮಸ್ ನಡುವೆ ಕೌಟುಂಬಿಕ ಕಲಹಗಳು ನಡೆಯುತ್ತಿತ್ತು. ಕ್ರಿಸ್ಟಿನಾ ಜೋಕ್ಸಿಮೊವಿಕ್ (38), ಫೆಬ್ರವರಿಯಲ್ಲಿ ಸ್ವಿಟ್ಜರ್ಲೆಂಡ್‌ನ ಬಾಸೆಲ್ ನಗರದ ಬಿನ್ನಿಂಗೆನ್‌ನಲ್ಲಿರುವ ತನ್ನ ಮನೆಯಲ್ಲಿ ಗಂಡ ಥಾಮಸ್ ನಿಂದ ಹತ್ಯೆಗೀಡಾಗಿದ್ದಾಳೆಂದು ವರದಿಯಾಗಿದೆ.
ಥಾಮಸ್ ಅವರ ಮನೆಯ ಬಳಿ ಕ್ರಿಸ್ಟಿನಾ ಅವರ ದೇಹದ ಭಾಗ ಪತ್ತೆಯಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆಯ ಬಳಿಕ ಆರೋಪಿ ಥಾಮಸ್ ನನ್ನು ಪೊಲೀಸರು ಬಂಧಿಸಿದ್ದು, ಪತ್ನಿಯ ದೇಹವನ್ನು ಬ್ಲೆಂಡರ್, ಹಾಗೂ ಇನ್ನಿತರ ವಸ್ತುವಿನಿಂದ ಕತ್ತರಿಸಿ ಕೊಂದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ಲಾಸಾನ್ನೆಯಲ್ಲಿರುವ ದೇಶದ ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈ ವೇಳೆ ಥಾಮಸ್ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾನೆ. ಆದರೆ ಕೋರ್ಟ್ ಆತನ ಬಿಡುಗಡೆಗೆ ನಿರಾಕರಿಸಿದೆ.