Monday, January 20, 2025
HomeUncategorizedದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾನುಪಲ್ಕೆ ಶಾಲಾ ವಾರ್ಷಿಕೋತ್ಸವ 2024-25

ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾನುಪಲ್ಕೆ ಶಾಲಾ ವಾರ್ಷಿಕೋತ್ಸವ 2024-25

ಬಂಟ್ವಾಳ : ಬಂಟ್ವಾಳ ತಾಲೂಕಿನ ಧಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾನುಪಲ್ಕೆ ಇಲ್ಲಿ ಶಾಲಾ ವಾರ್ಷಿಕೋತ್ಸವ 2024-25 ಕಾರ್ಯಕ್ರಮ ಡಿಸೆಂಬರ್ 13 ಶುಕ್ರವಾರ ಸಾಯಂಕಾಲ ಗಂಟೆ 5 ರಿಂದ ನಡೆಯಲಿರುವುದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ್ ಯು ವಹಿಸಲಿದ್ದು.
ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವರಾದ ಬಿ.ರಮನಾಥ ರೈ,ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತೀ ಎಸ್ ರಾವ್, ಉಪಾಧ್ಯಕ್ಷರಾದ ಸುರೇಶ್ ಕನ್ನೋಟ್ಟು,ಪಂಚಾಯತ್ ಸದಸ್ಯರುಗಳಾದ ಹರಿಶ್ಚಂದ್ರ ಕಾಡಬೆಟ್ಟು, ಜಯ ದೇವಾಡಿಗ, ದೇವಿ ಪ್ರಸಾದ್ ಶೆಟ್ಟಿ, ಶ್ರೀಮತಿ ಗೀತಾ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್ ಜಿ,
ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಭಾರ ಸಮನ್ವಯ ಅಧಿಕಾರಿ ವಿದ್ಯಾಕುಮಾರಿ, ಕಲ್ಲಡ್ಕ ವಲಯ ಶಿಕ್ಷಣ ಸಂಯೋಜಕಿ ಪ್ರತಿಮಾ ವೈ, ಕೆದಿಲ ಕ್ಲಸ್ಟರ್ ಸಿ ಆರ್ ಪಿ ಸುಧಾಕರ್ ಭಟ್,ಕೆಮ್ಮಾನುಪಲ್ಕೆ ಶಾಲಾ ಹಿತೈಷಿ ಬಳಗದ ಅಧ್ಯಕ್ಷ ಸುಧಾಕರ್ ಮುಚ್ಚಿಲ , ಮೊದಲಾದವರು ಭಾಗವಹಿಸಲಿರುವರು.

ಕಾರ್ಯಕ್ರಮದಲ್ಲಿ ಶಾಲ ನಿವೃತ್ತ ಮುಖ್ಯಶಿಕ್ಷಕ ಶ್ರೀಯುತ ಆನಂದ ನಾಯ್ಕ ಏನ್ ರವರಿಗೆ ಸನ್ಮಾನ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲಾ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನೆ ಮಾಡಲಾಗುವುದು.

ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು ಎಂದು ಕೆಮ್ಮಾನುಪಲ್ಕೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಕ್ ಯಾನೆ ಸಲೀಂ, ಹಾಗೂ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಉದಯಕುಮಾರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES
- Advertisment -
Google search engine

Most Popular