Friday, January 17, 2025
Homeಉಜಿರೆಗೌರಿಮಾರುಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮ ಸಮಾಪನ

ಗೌರಿಮಾರುಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮ ಸಮಾಪನ

ಉಜಿರೆ: ಧರ್ಮಸ್ಥಳದಲ್ಲಿ ಶನಿವಾರ ಬೆಳಗ್ಗಿನ ಜಾವ ಗೌರಿಮಾರುಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮ ಸಮಾಪನಗೊಂಡಿತು.
ನಾಡಿನೆಲ್ಲೆಡೆಯಿಂದ ಬಂದ ಲಕ್ಷಕ್ಕೂ ಮಿಕ್ಕಿದ ಭಕ್ತಾದಿಗಳು ಲಕ್ಷದೀಪೋತ್ಸವ ವೀಕ್ಷಿಸಿ ಧನ್ಯತೆಯನ್ನು ಹೊಂದಿದರು. ಕಲಾವಿದರು ಶ್ರದ್ಧಾ-ಭಕ್ತಿಯಿಂದ ವೈವಿಧ್ಯಮಯ ಕಲಾಸೇವೆಯನ್ನು ಅರ್ಪಿಸಿದರು. ದೇವಸ್ಥಾನ ವಠಾರ, ವಸ್ತುಪ್ರದರ್ಶನ, ಅಮೃತವರ್ಷಿಣಿ ಸಭಾಭವನ – ಎಲ್ಲೆಲ್ಲೂ ಭಕ್ತರ ಗಡಣವೇ ಇತ್ತು.
ಭಾನುವಾರ ರಾತ್ರಿ ಭಗವಾನ್ ಚಂದ್ರನಾಥಸ್ವಾಮಿ ಬಸದಿಯಲ್ಲಿ ಅಷ್ಟವಿಧಾರ್ಚನೆ ಪೂಜೆಯೊಂದಿಗೆ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಿತು.ವಸ್ತುಪ್ರರ‍್ಶನ ಮಂಟಪದಲ್ಲಿ ಬೆಂಗಳೂರಿನ ನೃತ್ಯಕುಟೀರ ತಂಡದವರಿಂದ ವಿದುಷಿ ಶ್ರೀಮತಿ ದೀಪಾ ಭಟ್ ನರ‍್ದೇಶನದಲ್ಲಿ “ನವರಸ ನಾಟ್ಯ ಶಿವ” ನೃತ್ಯರೂಪಕ ನಡೆಯಿತು.

RELATED ARTICLES
- Advertisment -
Google search engine

Most Popular