Saturday, September 14, 2024
Homeರಾಜ್ಯಬಹುಮುಖ ಪ್ರತಿಭೆ ದ್ವಾರಕೇಶ್‌ರವರ ಬದುಕಿನ ಪಯಣ

ಬಹುಮುಖ ಪ್ರತಿಭೆ ದ್ವಾರಕೇಶ್‌ರವರ ಬದುಕಿನ ಪಯಣ

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆಯ ಪ್ರತಿಭೆ, ಜನಪ್ರಿಯ ವ್ಯಕ್ತಿ, ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಪ್ರಚಂಡ ಕುಳ್ಳ ಎಂದೆ ಪ್ರಖ್ಯಾತರಾದ ದ್ವಾರಕೀಶ್ ಇಹಲೋಕ ತ್ಯಜಿಸಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ದ್ವಾರಕೇಶ್ ರವರ ಬದುಕಿನ ಪಯಣವನ್ನು ಸಂಕ್ಷಿಪ್ತವಾಗಿ ಮೇಲುಕು ಹಾಕಿ ನೋಡೋಣ.

1942 ಆಗಸ್ಟ್ 19ರಂದು ಜನಿಸಿದ ಇವರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದಂತಹ ಅಪರೂಪದ ನಟ. ಡಾ. ರಾಜಕುಮಾರ್, ವಿಷ್ಣುವರ್ಧನ್, ಶಂಕರನಾಗ್, ರಜನಿಕಾಂತ್, ಶ್ರೀನಾಥ್, ಅಂಬರೀಶ್, ಟೈಗರ್ ಪ್ರಭಾಕರ್ ರವರಂತಹ ಮೇರು ನಟರೊಂದಿಗೆ ನಟಿಸಿದ ಮೇಧಾವಿ. ಅವರು ಹೆಸರು ಮಾಡಿದ ಚಿತ್ರಗಳೆಂದರೆ ಮೇಯರ್ ಮುತ್ತಣ್ಣ, ಕುಳ್ಳ ಏಜೆಂಟ್ 000, ಭಕ್ತ ಕುಂಬಾರ, ಭಾಗ್ಯವಂತರು, ಗುರು ಶಿಷ್ಯರು, ಆಪ್ತಮಿತ್ರ, ದೇವರ ದುಡ್ಡು, ಅವರದೇ ಆದ ವಿಶೇಷ ಶೈಲಿಯಿಂದ ಒಬ್ಬ ಹಾಸ್ಯ ನಟರಾಗಿ, ನಂತರ ನಟರಾಗಿ, ಪೋಷಕ ನಟರಾಗಿ, ಸುಮಾರು ಐವತ್ತು ದಶಕಗಳಕಾಲ ಅಭಿನಯಿಸಿ, ನಿರ್ದೇಶಕ, ನಿರ್ಮಾಪಕರಾಗಿ ಅಪಾರ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದಾರೆ. ಹೀಗೆ 300ಚಿತ್ರಗಳಲ್ಲಿ ನಟನೆ, 30ಚಿತ್ರಗಳ ನಿರ್ದೇಶನ, 50 ಚಿತ್ರಗಳ ನಿರ್ಮಾಣ ಮಾಡಿದ್ದಾರೆ.

ಚಿತ್ರರಂಗದಲ್ಲಿ ಅಪಾರ ಪ್ರೀತಿ ಹೊಂದಿದ್ದ ದ್ವಾರಕೀಶ್ ರವರು ಸದಾ ಸಿನಿಮಾ ಅಂತಲೇ ತಮ್ಮ ಜೀವನವನ್ನು ಚಿತ್ರರಂಗಕ್ಕೆ ಮುಡುಪಾಗಿಟ್ಟಿದ್ದ ಧೀಮಂತ ವ್ಯಕ್ತಿ. ಸಿನಿಮಾ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು, ಹೊಸ ಹೊಸ ಆಲೋಚನೆಗಳೊಂದಿಗೆ ಕಠಿಣ ಸಾಹಸಕ್ಕೆ ಕೈ ಹಾಕುವ ಹುಚ್ಚಿನಲ್ಲಿ ನಿರ್ಮಿಸುವ ಕನಸು ಹೊಂದಿದ್ದ ಶ್ರೀಯುತ ದ್ವಾರಕೇಶ್‌ರವರು ಅನೇಕ ಹೊಸ ಪ್ರತಿಭೆ ಹೊಂದಿರುವ ನಟರನ್ನು ಚಿತ್ರರಂಗಕ್ಕೆ ಪರಿಚಯಿಸಿ, ಬೆಳೆಸಿದ್ದಾರೆ ಮತ್ತು ಮಾರ್ಗದರ್ಶಕರಾಗಿ ಪ್ರೋತ್ಸಾಹಿಸಿದ್ದಾರೆ. ಸದಾ ಹುರುಪು ಹುಮ್ಮಸ್ಸಿನಿಂದ ಇದ್ದ ದ್ವಾರಕೇಶ್ ರವರು ಹೆಸರಿಗೆ ಕುಳ್ಳ. ಅಷ್ಟೇ ಆದರೆ ಚಿತ್ರರಂಗ ಕ್ಷೇತ್ರದಲ್ಲಿ ಮತ್ತು ಅನುಭವದಲ್ಲಿ ಬಹಳ ಎತ್ತರಕ್ಕೆ ಬೆಳೆದಂತಹ
ಮೇಧಾವಿ. ಚಿತ್ರರಂಗದಲ್ಲಿ ಅನೇಕ ಏರು-ಇಳಿವು, ಸೋಲು-ಗೆಲುವು ಅನುಭವಿಸಿದ್ದರು ಮತ್ತೆ ಗೆದ್ದೇ ಗೆಲ್ಲುತ್ತೇನೆ ಎಂಬ ಭರವಸೆ, ಆಸೆ, ಛಲ, ನಂಬಿಕೆ ಹೊಂದಿದ ಉತ್ಸಾಹದ ಚಿಲುಮೆ ಮತ್ತು ಅದ್ಭುತ ಸಾಧನೆ ಮಾಡಿದ್ದಾರೆ. ಇದು ಸಾಮಾನ್ಯ ಸಾಧನೆಯಲ್ಲ, ಹೀಗೆ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಎಲ್ಲರ ಮನಸ್ಸಿನಲ್ಲಿ ಮಾಸದೇ ಉಳಿದಿರುವ ಜನಪ್ರಿಯ ನಟ ಕನ್ನಡದ ಕಣ್ಮಣಿ ದ್ವಾರಕೇಶ್ ರವರು ಅನೇಕರಿಗೆ ಮಾದರಿಯಾಗಿದ್ದಾರೆ.

1967 ಏಪ್ರಿಲ್ 26ರಂದು ಅಂಬುಜಾ ರವರನ್ನು ಮದುವೆಯಾದರು. ಇವರಿಗೆ ಇಬ್ಬರು ಪತ್ನಿಯರು ಮೊದಲ ಪತ್ನಿ ಅಂಬುಜ ಎರಡನೇ ಪತ್ನಿ ಶೈಲಜಾ ಮೊದಲ ಪತ್ನಿ ಅಂಬುಜ ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ
ಪ್ರೀತಿಸುತ್ತಿದ್ದರು. ಇವರಿಗೆ ಒಟ್ಟು ಐದು ಜನ ಗಂಡು ಮಕ್ಕಳು, ಇವರದು ಸುಖೀ ಕುಟುಂಬ.

RELATED ARTICLES
- Advertisment -
Google search engine

Most Popular