Thursday, December 5, 2024
Homeಪುತ್ತೂರುಅರಿವಿನ ಬೆಳಕು ನಮ್ಮಲ್ಲಿ ಮೂಡಬೇಕು - ಡಾ.ದುರ್ಗಾರತ್ನ ಸಿ

ಅರಿವಿನ ಬೆಳಕು ನಮ್ಮಲ್ಲಿ ಮೂಡಬೇಕು – ಡಾ.ದುರ್ಗಾರತ್ನ ಸಿ


ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ʼಮಾನವ ಕಳ್ಳಸಾಗಣೆ ” ಉಪನ್ಯಾಸ ಕಾರ್ಯಕ್ರಮ
ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ , ಕಲಾ ಸಂಘದ ಆಶ್ರಯದಲ್ಲಿ “ಮಾನವ ಕಳ್ಳಸಾಗಣೆ” ಎಂಬ ವಿಷಯದ ಕುರಿತಾಗಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾ.ದುರ್ಗಾರತ್ನ ಸಿ ಇವರು ಭಾಗವಹಿಸಿದರು. ಮಾನವ ಕಳ್ಳಸಾಗಣೆ ಯಾವ ಯಾವ ಹಂತದಲ್ಲಿ ನಡೆಯುತ್ತದೆ, ಅದನ್ನು ಯಾವ ರೀತಿಯಲ್ಲಿ ತಡೆಗಟ್ಟಬಹುದು, ಯಾವ ರೀತಿಯಾಗಿ ಪರಿಹಾರ ಕಂಡುಕೊಳ್ಳಬಹುದು ಎಂದು ಮನವರಿಕೆ ಮಾಡಿದರು.ಜೊತೆಗೆ ಮಾನವ ಕಳ್ಳಸಾಗಣೆ ಎಂಬ ಮಾಯಾ ಜಾಲದ ಕುರಿತು ಅರಿವು ಮೂಡಿಸಿದರು. “ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ವ್ಯಕ್ತಿಯು ಸುಶಿಕ್ಷಿತ ನಾಗರಿಕನಾಗುವುದು ಮಾತ್ರವಲ್ಲದೆ, ಅ ವ್ಯಕ್ತಿಯು ಪ್ರಜ್ಞಾವಂತ ನಾಗರಿಕನಾಗಬೇಕು. ಅರಿವಿನ ಬೆಳಕು ನಮ್ಮಲ್ಲಿ ಮೂಡಬೇಕು” ಎಂದು ಡೀನ್‌ ಆಫ್‌ ಹ್ಯುಮಾನಿಟೀಸ್‌ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ದುರ್ಗಾರತ್ನ ಸಿ ಇವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್‌ ನಿಟಿಲಾಪುರ ಮಾತಾನಾಡುತ್ತಾ, “ಮಾನವ ಕಳ್ಳಸಾಗಣೆ ಎಂಬುದು ಭ್ರಮೆಯಲ್ಲ, ಅದು ವಾಸ್ತವ ಎಂಬುದನ್ನು ಮನದಟ್ಟು ಮಾಡಿಕೊಂಡು, ನಾವು ಸಮಾಜವನ್ನು ಹೇಗೆ ನೋಡಬೇಕು, ನಮ್ಮ ಜವಾಬ್ದಾರಿ ಏನು ಅಂತ ತಿಳಿದಿರಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲಾ ಸಂಘದ ಸಂಯೋಜಕರಾದ ಮೋನಿಷಾ. ಎನ್‌, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಭಾಗವಹಿಸಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಧನಶ್ರೀ ಸ್ವಾಗತಿಸಿ, ಪಿ. ಯುಕ್ತಶ್ರೀ ವಂದಿಸಿದರು. ಪ್ರಥಮ ಪಿಯುಸಿಯ ವಿದ್ಯಾರ್ಥಿನಿ ಪ್ರೀತಿ ಕಾರ್ಯಕ್ರಮವನ್ನು ನಿರೂಪಿಸಿದರು.

RELATED ARTICLES
- Advertisment -
Google search engine

Most Popular