ಜನರು ಕನಸಿನ ಮನೆಯನ್ನು ನನಸಾಗಿಸಲು ಫರಂಗಿಪೇಟೆಯ ಕಡೆಗೋಳಿಯಲ್ಲಿ ’ದಿ ಮಾಟ್ರೆಸ್ ಸ್ಟೋರ್’ ಮಳಿಗೆ ಶುಭಾರಂಭಗೊಂಡಿದೆ. ಉದ್ಘಾಟನಾ ಸಮಾರಂಭದಲ್ಲಿ ಮಳಿಗೆಯ ಮಾಲಕಿ ವೀಣಾ ಮಾತನಾಡಿ, ವರ್ಷದ 365 ದಿನಗಳಲ್ಲಿ ಒಂದನೇ ಮೂರು ಭಾಗದಷ್ಟು ನಿದ್ದೆ, ಎಂದರೆ 121 ದಿನ 2920 ಗಂಟೆ ಮಾಡುತ್ತೇವೆ. ಹಾಗೆಯೇ ನಾವು ಉಪಯೋಗಿಸುವ ಹಾಸಿಗೆ ಮಲಗುವ ಕೋಣೆ ಹೇಗಿರಬೇಕು ಹಾ್ಗೂ ನಿದ್ದೆಯ ಪ್ರಾಮುಖ್ಯತೆ ಕುರಿತು ಮಾತನಾಡಿದರು.
ಮ್ಯಾನೇಜರ್ ಸುಬಾಷ್ ಮಾತನಾಡಿ, ಕಡೆಗೋಳಿ ಫರಂಗಿಪೇಟೆ ಪ್ರದೇಶದ ಜನರಿಗೆ ಇಂತಹದೊಂದು ಮಳಿಗೆಯ ಅಗತ್ಯವಿದ್ದು ಗ್ರಾಹಕರ ಬೇಡಿಕೆಯನ್ನು ಈಡೇರಿಸುವಲ್ಲಿ ನಮ್ಮ ಪ್ರಯತ್ನ ನಿರಂತರವಾಗಿ ಇರಲಿದೆ. ಉದ್ಯೋಗಿ ಮೋಕ್ಷ ಮಾತನಾಡಿ, ನಮ್ಮಲ್ಲಿ ಪ್ರತಿಷ್ಠಿತ ಡ್ಯೂರೋಪ್ಲೆಕ್ಸ್, ಕರ್ಲೊನ್, ಸ್ಲೀಪ್ ವೆಲ್ ಕಂಪೆನಿಯ ಹಾಸಿಗೆಗಳು, ಕರ್ಟೆನ್ಸ್, ಡೋರ್ ಮಾಟ್ಸ್, ಬೆಡ್ ಶೀಟ್ಸ್, ಕಂಫರ್ಟರ್ಸ್ ಗಳು ಲಭ್ಯ ವಿದೆ ಎಂದು ತಿಳಿಸಿದರು. ಸಂಗೀತ ಸಜಿಪ, ವಿದ್ಯಾ ಪುಂಜಲ್ ಕಟ್ಟೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.