Friday, February 14, 2025
HomeUncategorizedಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆಯ ಅನಿವಾರ್ಯತೆ : ವಿ...

ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆಯ ಅನಿವಾರ್ಯತೆ : ವಿ ಸುನಿಲ್ ಕುಮಾರ್

ಕಾರ್ಕಳ: ತನ್ನ ವಿವಿಧ ಯೋಜನೆ, ಅವೈಜ್ಞಾನಿಕ ನೀತಿಯಿಂದಾಗಿ ಜನತೆಯನ್ನು ದಿನೆದಿನೇ ಆರ್ಥಿಕವಾಗಿ ಹೀನಾಸ್ಥಿತಿಗೆ ಕೊಂಡೊಯ್ಯುತ್ತಿರುವ ,ಹೆಸರಿಗಷ್ಟೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಭ್ರಷ್ಟ ರಾಜ್ಯ ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆ ನಡೆಸುವ ಅನಿವಾರ್ಯತೆಯಿದೆ ಎಂದು ಕಾರ್ಕಳದ ಶಾಸಕರಾದ ವಿ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.

ಬೆಲೆ ಏರಿಕೆ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ನಂತರ ಹಾಲು, ಪೆಟ್ರೋಲ್‌, ಡಿಸೇಲ್‌, ಬಸ್‌ ದರ, ರೈತರ ಪಹಣಿ, ವಿದ್ಯುತ್‌ ದರ, ಅಬಕಾರಿ, ಸರಕಾರಿ ಪ್ರಮಾಣಪತ್ರ, ದತ್ತುಡೀಡ್‌ ಹೀಗೆ ಎಲ್ಲಾ ವಿಭಾಗಗಳಲ್ಲೂ ನಿರಂತರವಾಗಿ ಬೆಲೆಏರಿಕೆ ನಡೆಸುತ್ತಲೇ ಇದೆ.

ಬಡವರ ರೇಷನ್‌ ಕಾರ್ಡ್‌ ರದ್ಧತಿ

ಬಡ ಕುಟುಂಬಗಳು ವಿದ್ಯಾಭ್ಯಾಸ ಹಾಗೂ ಆರೋಗ್ಯ ಭದ್ರತೆದೃಷ್ಟಿಯಲ್ಲಿ ಅನುಕೂಲವಾಗುತ್ತಿದ ಅನೇಕ BPL ಕಾರ್ಡುಗಳನ್ನು ವಿವಿಧ ನೆಪಗಳನ್ನು ನೀಡಿ ಕಾಂಗ್ರೆಸ್‌ ರದ್ದು ಮಾಡುತ್ತಿದೆ. ಕಾರ್ಕಳ ವಿಧಾನ ಸಭಾಕ್ಷೇತ್ರದಲ್ಲಿಈವರೆಗೆ ಸುಮಾರು 7000 ಕ್ಕೂಅಧಿಕ ಬಿ.ಪಿ.ಎಲ್. ಕಾರ್ಡ್‌ಗಳನ್ನು ರದ್ದುಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಇದರಲ್ಲಿಈಗಾಗಲೇ ಅನೇಕ ಬಿ.ಪಿ.ಎಲ್. ಕಾರ್ಡ್ಗಳನ್ನು ರದ್ದುಗೊಳಿಸಿದ್ದಾರೆ.

ಯಾವುದೇ ರೀತಿಯ ಅಭಿವೃದ್ಧಿಗೆ ಅನುದಾನವಿಲ್ಲ, ಅಕ್ರಮಸಕ್ರಮ ಅರ್ಜಿತಿರಸ್ಕೃತ, ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿಗುವ ಕೆಂಪುಕಲ್ಲು ಹಾಗೂ ಮರಳು ಪೂರೈಕೆಗೆ ಸರಿಯಾದ ನೀತಿಗಳನ್ನು ಮಾಡದೇ ಎಲ್ಲದಕ್ಕೂ ತಡೆ, ಹೀಗೆ ಎಲ್ಲಾ ರೀತಿಯಿಂದಲೂ ಜನರನ್ನು ದರೋಡೆ ಮಾಡುತ್ತಿರುವ, ಕರ್ನಾಟಕವನ್ನು ದಿವಾಳಿ ಮಾಡುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಭಷ್ಟತೆಯ ವಿರುದ್ಧ ರಾಜ್ಯದ ಜನೆತೆ ಹೋರಾಟ ನಡೆಸುವ ಅನಿವಾರ್ಯತೆಯಿದೆ ಎಂದು ಗುಡುಗಿದ್ದಾರೆ.

ಈ ಸಂದರ್ಭದಲ್ಲಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌, ಗೇರು ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷರಾದ ಮಣಿರಾಜ್‌ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ, ಜಯರಾಮ್‌ ಸಾಲ್ಯಾನ್‌, ಜಿಲ್ಲಾಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯಶೆಟ್ಟಿ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿಗಳಾದ ಬೋಳ ಸತೀಶ್‌ ಪೂಜಾರಿ ಸ್ವಾಗತಿಸಿ ಶಿವಪುರ ಸುರೇಶ್‌ ಶೆಟ್ಟಿ ಧನ್ಯವಾದ ವಿತ್ತರು. ಪಳ್ಳಿ ಗ್ರಾಮ ಪಂಚಾಯತ್‌ ಸದಸ್ಯ ಶ್ರೀಕಾಂತ್‌ ನಿರೂಪಿಸಿದರು.

RELATED ARTICLES
- Advertisment -
Google search engine

Most Popular