ಬೆಳ್ತಂಗಡಿ : ಕನ್ಯಾಡಿ ಶ್ರೀರಾಮ ನಿಲಯದ ವಸಂತಿ ಮತ್ತು ರಾಮಣ್ಣ ಗುಡಿಗಾರರ ಮಗಳ ಶುಭವಿವಾಹದ ಆರತಕ್ಷತೆಯ ಸಂದರ್ಭದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿ ರೂ. 25,000 ಮೊತ್ತವನ್ನು ನೀಡಿ ಶುಭಹಾರೈಸಿದರು.
ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕರಾದ ಕೆ. ವಿನಾಯಕ ರಾವ್ ಇದನ್ನು ಸಿಬ್ಬಂದಿಯೊಂದಿಗೆ ಸ್ವೀಕರಿಸಿ. ನವ ವಧುವರರಿಗೆ ಶುಭಹಾರೈಸಿ ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಸ್ವರ್ಣಗೌರಿ, ಟ್ರಸ್ಟಿ ಕೃಷ್ಣಪ್ಪ ಗುಡಿಗಾರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.