ಶ್ರೀ ಯಕ್ಷಿ ಅಮ್ಮನವರ ಮತ್ತು ಸಪರಿವಾರ ದೇವಸ್ಥಾನ ಬಡಾಕೆರೆ ನೂತನ ದೇವಾಲಯ ಲೋಕಾರ್ಪಣೆಗೊಂಡಿದೆ.
ಶ್ರೀದೇವರಿಗೆ ಗುರುಗಣಪತಿ ಪೂಜಾ- ಪುಣ್ಯಾಹವಾಚನ ಮಹಾಸಂಕಲ್ಪ, ಪ್ರಸಾದ ಶುದ್ದಿ -ರಾಕ್ಷೋಘ್ನ ಹೋಮ ವಾಸ್ತುಹೋಮ, ವಾಸ್ತುಪೂಜೆ, ವಾಸ್ತುಬಲಿದಾನ ಬಿಂಬ ಶುದ್ಧಿ- ಬಿಂಬಾಧಿವಾಸ ಪೂಜಾ – ಪ್ರತಿಷ್ಠಾ ಹೋಮ ಶ್ರೀ ದೇವಿಯ ಪ್ರತಿಷ್ಠೆ ಅಧಿವಾಸ ಹೋಮ ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮ ಸಂಭ್ರಮದಲ್ಲಿ ನಡೆಯಿತು.
ದೇವಸ್ಥಾನ ಸುತ್ತಲೂ ವಿದ್ಯುತ್ ದೀಪಾಲಂಕಾರ ಹೂವಿನ ಅಲಂಕಾರ ಕಂಗೊಳಿಸುತ್ತಿತ್ತು. ಶ್ರೀದೇವಿಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮ,ಶ್ರೀ ಗುರುಮೂರ್ತಿ ಅಡಿಗ ಹೆದ್ದಾರಿಮಠ ಇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಇಂದು ಬೆಳಿಗ್ಗೆ ಚತುವಿಂಶತಿ ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ- ಕಲಾ ಹೋಮ ನವಗ್ರಹ ಹೋಮ – ಬ್ರಹ್ಮಕಲಶಾಭಿಷೇಕ ಮಹಾಪೂಜೆ- ಪ್ರಸಾದ ವಿತರಣೆ ಮತ್ತು ಮಧ್ಯಾಹ್ನ ಗಂಟೆ 12-30ಕ್ಕೆ ಅನ್ನಸಂತರ್ಪಣೆ ರಾತ್ರಿ ಗಂಟೆ 8-30ಕ್ಕೆ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಹಿರಿಯಡಕ ಕ್ಷೇತ್ರ ಮಹಾತ್ಮ ಯಕ್ಷಗಾನ ನಡೆಯಿತು.
ವಿವಿಧ ಭಜನಾ ತಂಡಗಳು ಆಗಮಿಸಿ ಕುಣಿತ ಭಜನಾ ಕಾರ್ಯಕ್ರಮವನ್ನು ಸಾನಿಧ್ಯದಲ್ಲಿ ಸಂಪನ್ನಗೊಂಡಿತು. ದೇವಸ್ಥಾನಕ್ಕೆ ಧನಸಾಯ ಮಾಡಿದ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರು ಕಾರ್ಯದರ್ಶಿ ಸರ್ವಸದಸ್ಯರು ಅರ್ಚಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.