ನಮ್ಮ ಹೆಮ್ಮೆಯ ಶ್ರೀಮತಿ ಲೀಲಾವತಿ ಬೈಪಡಿತಾಯರು ಮುತೈದೆಯಾಗಿ ಸಾವನ್ನು ಅಪ್ಪಿದರು.
ಯಕ್ಷಗಾನ ಕ್ಷೇತ್ರದಲ್ಲಿ ಮಿಂಚಿನ ಓಟಗಾರ್ತಿಯಾಗಿ ಭಾಗವತಿಕೆಯಲ್ಲಿ ಮೇಳದಲ್ಲಿ ವೃತ್ತಿ ಕಲಾವಿದೆಯಾಗಿ ಪ್ರಥಮ ಮಹಿಳೆ ಕಲಾವಿದರು ಎಂಬ ಹೆಗ್ಗಳಿಕೆಗೂ ಪಾತ್ರ ಆದವರು.
ಮಹಿಳಾ ಕಲಾವಿದರಿಗೆ ಸ್ಪೂರ್ತಿ ತುಂಬಿದ ಅನುಕರಣೆಯನ್ನು ಮಾಡಲು ಸಾದ್ಯವಾಗಿಸಿದ ಕೀರ್ತಿವಂತೆ ಕಲಾ ಸುಪುತ್ರನ ನಮ್ಮ ಲೀಲಾವತಿ ಅಮ್ಮ .
ಶಿಷ್ಯ ವೃಂದದಿಂದ 75ನೇ ವರುಷ ಹರಿಲೀಲಾ ಕಾರ್ಯಕ್ರಮದಿಂದ ಮತ್ತಷ್ಟು ಹೆಗ್ಗುರುತು ಆಗಿ ನಂತರ ಕರ್ನಾಟಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಥಮ ಮಹಿಳಾ ಯಕ್ಷಗಾನ ಕಲಾವಿದೆ ನಮ್ಮ ಬೈಪಡಿತ್ತಾಯರು ನಮಗೆ ಹೆಮ್ಮೆ ಅಭಿಮಾನ ಆಗುತ್ತಿದೆ.
ಅದೆಷ್ಟೋ ಸನ್ಮಾನ,ಗೌರವ,ಪ್ರಶಸ್ತಿ ಪುರಸ್ಕಾರ ಗಿಟ್ಟಿಸಿಕೊಂಡ ಲೀಲಾವತಿ ಅಮ್ಮ ನಮ್ಮ ಅಗಲಿದ್ದು ಯಕ್ಷಗಾನ ಕ್ಷೇತ್ರಕ್ಕೆ ಅಪಾರ ನಷ್ಟ.
ಇವರ ಆತ್ಮಕ್ಕೆ ಭಗವಂತ ಸದ್ಗತಿಯನಿತ್ತು ಶಾಂತಿ ಕರುಣಿಸಲಿ. ಸದಾಕಾಲ ನಿಮ್ಮ ಆದರ್ಶ ನಮಗೆ ಯಕ್ಷಗಾನ ಕ್ಷೇತ್ರಕ್ಕೆ ದಾರಿದೀಪ ಆಗಲೆಂದು ನಿರಂತರ ಅಪೇಕ್ಷಿಸುವ..
-ಎಕ್ಕಾರು ದಯಾಮಣಿ ಸುಧಾಕರ್ ಶೆಟ್ಟಿ ಬಾಳದಗುತ್ತು.
ಯಕ್ಷಗಾನ ಕ್ಷೇತ್ರದ ಹೆಮ್ಮೆಯ ಪ್ರಥಮ ಮಹಿಳಾ ಕಲಾವಿದೆಯಾದ ಲೀಲಾವತಿ ಬೈಪಡಿತಾಯರ ಅಗಲಿಕೆ
RELATED ARTICLES