Friday, January 17, 2025
HomeUncategorizedನಡು ರಸ್ತೆಯಲ್ಲಿಯೇ ಹುಡುಗಿಯನ್ನು ಚುಡಾಯಿಸಿ ಯುವಕ ಗ್ರಹಚಾರ ಬಿಡಿಸಿದ ಜನ..!

ನಡು ರಸ್ತೆಯಲ್ಲಿಯೇ ಹುಡುಗಿಯನ್ನು ಚುಡಾಯಿಸಿ ಯುವಕ ಗ್ರಹಚಾರ ಬಿಡಿಸಿದ ಜನ..!

ಉತ್ತರ ಪ್ರದೇಶ: ಪುಂಡ ಪೋಕರಿಗಳ ಕಾಟದಿಂದ ಮಹಿಳೆಯರು, ಯುವತಿಯರು ನೆಮ್ಮದಿಯಾಗಿ ಓಡಾಡಲು ಕೂಡ ಕಷ್ಟಸಾಧ್ಯವಾಗಿದೆ. ಅದರಲ್ಲೂ ಒಂಟಿ ಯುವತಿ ಬೀದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಳೆಂದರೆ ಆಕೆಯನ್ನು ಚುಡಾಯಿಸಲೆಂದೇ ಕೆಲ ಪುಂಡರು ಕಾದು ಕುಳಿತಿರುತ್ತಾರೆ. ಹೀಗೆ ಪುಂಡರು ಹೆಣ್ಣು ಮಕ್ಕಳನ್ನು ಚುಡಾಯಿಸುವಂತಹ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಇಂತಹದ್ದೇ ಘಟನೆಯೊಂದು ನಡೆದಿದ್ದು, ಪುಂಡನೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹುಡುಗಿಗೆ ಚುಡಾಯಿಸಿದ್ದು, ಈ ದೃಶ್ಯವನ್ನು ಕಂಡು ಅಲ್ಲಿದ್ದ ಜನ ನಡುರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಜಾಡಿಸಿ ಆತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದ್ದು, ಯುವತಿಯನ್ನು ಚುಡಾಯಿಸಿದ ಪುಂಡನಿಗೆ ಜನರೆಲ್ಲರೂ ಸೇರಿ ನಡು ರಸ್ತೆಯಲ್ಲಿಯೇ ಜಾಡಿಸಿ, ಆತನ ಚಳಿ ಬಿಡಿಸಿದ್ದಾರೆ. ಯುವತಿಯೊಬ್ಬಳಿಗೆ ಚುಡಾಯಿಸುತ್ತಿದ್ದಾಗ ಆತ ಅಲ್ಲಿದ್ದ ಸ್ಥಳೀಯರ ಕೈಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದು, ಇಂತಹ ಪುಂಡ ಪೋಕರಿಗಳಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಜನರೆಲ್ಲಾ ಸೇರಿ ನಡುರಸ್ತೆಯಲ್ಲಿಯೇ ಆತನಿಗೆ ಸರಿಯಾಗಿ ಥಳಿಸಿದ್ದಾರೆ.

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವತಿಯನ್ನು ಚುಡಾಯಿಸಿದ ಪುಂಡನಿಗೆ ಸ್ಥಳೀಯರೆಲ್ಲರೂ ಸೇರಿ ನಡು ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಜಾಡಿಸಿ ತಕ್ಕ ಪಾಠ ಕಲಿಸಿದಂತಹ ದೃಶ್ಯವನ್ನು ಕಾಣಬಹುದು.

ಡಿಸೆಂಬರ್‌ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ 58 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇನ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹುಡುಗಿಯನ್ನು ಚುಡಾಯಿಸಿದವನಿಗೆ ಜನ ತಕ್ಕ ಪಾಠ ಕಲಿಸಿದ್ದಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಜನರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular