ಯು.ಎಸ್. ಸೋಯಾಬೀನ್ ಎಕ್ಸ್ ಪೋರ್ಟ್ ಕೌನ್ಸಿಲ್ (ಯುಎಸ್ಎಸ್ಇಸಿ) ಜೊತೆ ಸೇರಿಕೊಂಡು ಯುಎಸ್ಎ ಪೌಲ್ಟ್ರಿ ಆಂಡ್ ಎಗ್ ಎಕ್ಸ್ ಪೋರ್ಟ್ ಕೌನ್ಸಿಲ್ (ಯುಎಸ್ಎಪಿಇಇಸಿ) ಪ್ರಸ್ತುತ ಪಡಿಸಿದ, ರೈಟ್ ಟು ಪ್ರೊಟೀನ್ ಆಯೋಜನೆಯ ವಿಶೇಷ ಟಿ20 ಕ್ರಿಕೆಟ್ ವಿಶ್ವಕಪ್ ಕಾರ್ಯಕ್ರಮ ‘ದಿ ಪ್ರೊಟೀನ್ ಪವರ್ ಪ್ಲೇ’ ಬೆಂಗಳೂರಿನ ದಿ ರಿಟ್ಜ್-ಕಾರ್ಲ್‌ಟನ್‌ನ ರಿವಾಜ್ ನಲ್ಲಿ ನಡೆಯಿತು.
ಕ್ಯಾಲಿಫೋರ್ನಿಯಾ ವೈನ್ಸ್ ನಿಂದ ಬೆಂಬಲಿತವಾದ ಈ ಕಾರ್ಯಕ್ರಮದಲ್ಲಿ ಯುಎಸ್ ಟರ್ಕಿ ಪಕ್ಷಿಯ ಮಾಂಸಾಹಾರ ಮತ್ತು ಉತ್ತಮವಾದ ವೈನ್‌ಗಳ ಸೊಗಸಾದ ಪ್ರದರ್ಶನ ಮಾಡಲಾಯಿತು.
ಏಷ್ಯಾ ವಿಭಾಗದ ಉದ್ಯಮದ ಪ್ರಮುಖ ಪಾಲುದಾರರು ಮತ್ತು ಪ್ರಭಾವಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.