Thursday, May 1, 2025
Homeಮೂಡುಬಿದಿರೆಏ.23ರಿಂದ ಇಟಲ ದೇವಸ್ಥಾನ ಉತ್ಸವ

ಏ.23ರಿಂದ ಇಟಲ ದೇವಸ್ಥಾನ ಉತ್ಸವ

ಮೂಡುಬಿದಿರೆ: ದರೆಗುಡ್ಡೆ ಕೊನ್ನಾರ ಮಾಗಣೆಯ ಶ್ರೀಕ್ಷೇತ್ರ ಇಟಲ ಶ್ರೀ ಸೋಮನಾಥೇಶ್ವರ ದೇವಳದ ಜೀರ್ಣೋದ್ದಾರ ಕೆಲಸ ಪ್ರಗತಿಯಲ್ಲಿದ್ದು, ಪೂರ್ವಭಾವಿ ಸಭೆಯಲ್ಲಿ ಬ್ರಹ್ಮಕಲಶ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮದ ದಿನಾಂಕ ಘೋಷಣೆ ಮಾಡಲಾಯಿತು.

2.2300 ಉತ್ಸವ ಪ್ರಾರಂಭಗೊಳ್ಳಲಿದ್ದು, ಬ್ರಹ್ಮಕಲಶ, ವಾರ್ಷಿಕ ಜಾತ್ರೆ 7ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಾ.12ರಂದು ನಾಗ ಪ್ರತಿಷ್ಠಾಪನೆ, 16ರಂದು ಧ್ವಜ ಸ್ತಂಭ ಪ್ರತಿಷ್ಠಾಪನಾ ಕಾರ್ಯಕ್ರಮ, ಏ.30ಕ್ಕೆ ಶ್ರೀ ಸೋಮನಾಥ ದೇವರು, ಅಗ್ನಿ ಗಣಪತಿ ಹಾಗೂ ಮಹಿಷಮರ್ದಿನಿ ದೇವಿಯ ಪ್ರತಿಷ್ಠಾಪನೆ, ಮೇ 2ರಂದು ಬ್ರಹ್ಮ ಕಲಶೋತ್ಸವ ನಡೆಯಲಿದೆ.

ಪಣಪಿಲ ಅರಮನೆಯ ಪ್ರಮುಖರಾದ ವಿಮಲ್ ಕುಮಾರ್ ಶೆಟ್ಟಿ, ತಂತ್ರಿಗಳಾದ ನರಸಿಂಹ ತಂತ್ರಿ, ರಾಘವೇಂದ್ರ ಭಟ್, ಆಸ್ರಣ್ಣರಾದ ನಾಗರಾಜ್ ಭಟ್, ಹಿರಿಯರಾದ ಕೆಲ್ಲಪುತ್ತಿಗೆ ಪರಾರಿ ಕೆ.ಪಿ.ಜಗದೀಶ್ ಅಧಿಕಾರಿ, ಪಂಚದುರ್ಗಾ ಪಡುಕೊಣಾಜೆ ತಿಮ್ಮಯ್ಯ ಶೆಟ್ಟಿ, ಪಣಪಿಲ, ಅಳಿಯೂರು ಗರಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರವೀಣ್ ಭಟ್, ಪಣಪಿಲ ಅರಮನೆಯ ಭರತ್ ಜೈನ್, ಸುದೀಶ್ ಅನಡ್ಕ, ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಸುಕೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಅರಿಗ, ಕಾರ್ಯದರ್ಶಿ ವಿಶ್ವನಾಥ್ ಕೋಟ್ಯಾನ್ ಹನ್ನೇರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular