ಬೆಳಗಾವಿ: ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಅಪ್ಪ ಮೃತಪಟ್ಟರೂ ಮುಖ ನೋಡಲೂ ಸಹ ಪುತ್ರ ಬಾರದ ಘಟನೆ ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೋವಾ ಮೂಲದ ಸತೀಶ್ವರ ಸಿನ್ಹಾ (62) ಕೆಲ ದಿನಗಳಿಂದ ಸುಟ್ಟ ಗಾಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ತಂದೆ ಸತೀಶ್ವರ ಸಿನ್ಹಾರನ್ನು ಪುತ್ರ ಉತ್ತಮ್ ಸಿನ್ಹಾ ಮಾರ್ಚ್ 22ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸತೀಶ್ವರ ಸಿನ್ಹಾ ಮೃತಪಟ್ಟಿದ್ದಾರೆ.
ಆಸ್ಪತ್ರೆಗೆ ದಾಖಲಿಸುವಾಗ ಪುತ್ರ ಉತ್ತಮ್ ಸಿನ್ಹಾ ತನ್ನ ತಂದೆ ಸತೀಶ್ವರ ಸಿನ್ಹಾ ಕೆಲಸ ಮಾಡ್ತಿದ್ದ ಹೋಟೆಲ್ ಮಾಲೀಕರ ನಂಬರ್ ನೀಡಿದ್ದಾನೆ. ತಂದೆ ಸತೀಶ್ವರ್ ಸಿನ್ಹಾ ಮೃತಪಟ್ಟರೂ ಉತ್ತಮ್ ಸಿನ್ಹಾ ಮುಖ ನೋಡಲು ಬಂದಿಲ್ಲ. ಹೀಗಾಗಿ, ಪೊಲೀಸರು ಗೋವಾದಲ್ಲಿರುವ ಸತೀಶ್ವರ ಸಿನ್ಹಾರ ಮಗಳಿಗೆ ಕರೆ ಮಾಡಿರುವ ವಿಷಯ ತಿಳಿಸಿದ್ದಾರೆ. ಸತೀಶ್ವರ್ ಸಿನ್ಹಾ ಮಗಳ ಬರುವಿಕೆಗಾಗಿ ಪೊಲೀಸರು ಕಾದು ಕುಳಿತಿದ್ದಾರೆ. ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.