Sunday, January 19, 2025
Homeಅಪರಾಧತಾಯಿ ಸಾವಿಗೆ ಕಾರಣವಾದ ತಂದೆಯನ್ನೇ ಹತ್ಯೆಗೈದ ಮಗ

ತಾಯಿ ಸಾವಿಗೆ ಕಾರಣವಾದ ತಂದೆಯನ್ನೇ ಹತ್ಯೆಗೈದ ಮಗ

ದಾವಣಗೆರೆ : ತನ್ನ ತಾಯಿ ಸಾವಿಗೆ ತಂದೆ ಕಾರಣ ಎಂದು ರೊಚ್ಚಿಗೆದ್ದ ಮಗ ತಂದೆಯನ್ನು ಹತ್ಯೆಗೈದಿರುವಂತಹ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ‌ ಲಕ್ಕಿಂಪುರ ಗ್ರಾಮದಲ್ಲಿ ನಡೆದಿದೆ. ಕಲ್ಲು ಎತ್ತಿಹಾಕಿ ತಂದೆ ಅಂಜನಪ್ಪ (60)ರನ್ನು ಮಗ ರಮೇಶ್​ ಹತ್ಯೆಗೈದಿದ್ದಾನೆ. ನಿತ್ಯ ಕುಡಿದು ಬಂದು ಮನೆಯಲ್ಲಿ ಜಗಳವಾಡುತ್ತಿದ್ದ ಪತಿ ಕಿರುಕುಳಕ್ಕೆ ಬೇಸತ್ತು ತಡರಾತ್ರಿ ಪತ್ನಿ ತಪ್ಪಮ್ಮ(52) ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಹೀಗಾಗಿ ತಾಯಿ ಸಾವಿಗೆ ತಂದೆಯೇ ಕಾರಣ ಎಂದು ಹತ್ಯೆ ಮಾಡಲಾಗಿದೆ. ಸದ್ಯ ಆರೋಪಿಯನ್ನು ಜಗಳೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

RELATED ARTICLES
- Advertisment -
Google search engine

Most Popular