Wednesday, February 19, 2025
Homeರಾಷ್ಟ್ರೀಯ144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳದ 'ಪುಣ್ಯ ಸ್ನಾನದ' ವಿಶೇಷತೆ..!

144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳದ ‘ಪುಣ್ಯ ಸ್ನಾನದ’ ವಿಶೇಷತೆ..!


ಪ್ರಯಾಗರಾಜ್: 12 ವರ್ಷಕ್ಕೊಮ್ಮೆ ನಡೆಯೋ ಕುಂಭಮೇಳವಲ್ಲ, ಮನುಷ್ಯನ ಏಳೂ ಜನ್ಮಗಳ ಪಾಪಗಳನ್ನೆಲ್ಲಾ ಒಂದೇ ಸಲಕ್ಕೆ ತೊಳೆಯಬಲ್ಲಂತಹ, ಶತಮಾನಗಳಿಗೊಮ್ಮೆ ಘಟಿಸೋ ದಿವ್ಯಾದ್ಭುತ ಪುಣ್ಯಸ್ನಾನದ ಮಹಾಕುಂಭಮೇಳ. 144 ವರ್ಷಕ್ಕೆ ಒಮ್ಮೆ ನಡೆಯುವ ಮಹಾಕುಂಭಮೇಳ
ಈ ಬಾರಿ ಪ್ರಯಾಗರಾಜ್ ಇದೇ ಸಂಕ್ರಾಂತಿಯಿಂದ ಇಂತಾದ್ದೊಂದು ಮಹಾ ಅದ್ಭುತಕ್ಕೆ ತೆರೆದುಕೊಳ್ಳುತ್ತಿದೆ.
ಅದ್ಯಾವ್ ಜನ್ಮದಲ್ಲಿ ಅದೇನ್ ಪುಣ್ಯ ಮಾಡಿದ್ವೋ ನಾವೆಲ್ಲಾ ಮನುಷ್ಯನಿಗೆ ಏಳು ಜನ್ಮಕ್ಕೊಮ್ಮೆ ಮಾತ್ರ ಪ್ರಾಪ್ತಿಯಾಗೋ ಪುಣ್ಯವೆನ್ನಲಾಗುವ, ಬರೋಬ್ಬರಿ 144 ವರ್ಷಕ್ಕೊಮ್ಮೆ ಘಟಿಸೋ ಮಹಾಕುಂಭಮೇಳಕ್ಕೆ ಸಾಕ್ಷಿಯಾಗಲಿದ್ದೇವೆ.

ಜಜವರಿ 14 ಸಂಕ್ರಾಂತಿಯಿಂದ ಪ್ರಯಾಗರಾಜ್ ಮಹಾಕುಂಭಮೇಳವು ಪ್ರಾರಂಭಗೊಂಡು ಫೆಬ್ರವರಿ 26ರ ಶಿವರಾತ್ರಿಯಂದು ಕೊನೆಗೊಳ್ಳಲಿದೆ.
ಕುಂಭಮೇಳದ ಕೆಲವೊಂದು ವಿಶೇಷ ಸ್ನಾನಗಳು.
ಜನವರಿ 13 : ಪುಷ್ಯಹುಣ್ಣಿಮೆ
ಜನವರಿ 14 : ಮಕರಸಂಕ್ರಾಂತಿ.
ಜನವರಿ 29 : ಮೌನಿ ಅಮವಾಸ್ಯೆ
ಫೆಬ್ರವರಿ 03 : ವಸಂತಪಂಚಮಿ.
ಫೆಬ್ರವರಿ 12 : ಮಾಘಹುಣ್ಣಿಮೆ. ಹಾಗೂ,
ಫೆಬ್ರವರಿ 26 : ಮಹಾಶಿವರಾತ್ರಿ.


ಕುಂಭಮೇಳದಲ್ಲಿ ಮೂರು ವಿಧ

  1. ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸೋದು ಪೂರ್ಣ ಕುಂಭಮೇಳ. ಇದನ್ನು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಹಾಗೂ ಉಜ್ಜಯಿನಿಲ್ಲಿ ಆಚರಿಸಲಾಗುತ್ತದೆ.
  2. ಈ ಪೂರ್ಣಕುಂಭ ಮೇಳವು 12 ಬಾರಿ ನಡೆದು ಒಂದು ವೃತ್ತ ಪೂರ್ಣವಾದಾಗ (12×12 = 144) ಅಂದರೆ 144ವರ್ಷಗಳಿಗೊಮ್ಮೆ ನಡೆಯೋದು ಮಹಾಕುಂಭಮೇಳ.
  3. ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧಕುಂಭದ ಹೆಸರಲ್ಲಿ ಕುಂಭಮೇಳದ ಆಯೋಜನೆಯಾಗುತ್ತದೆ. ಆದರೆ ಇದು ಪ್ರಯಾಗರಾಜ್ ಹಾಗೂ ಹರಿದ್ವಾರದಲ್ಲಿ ಮಾತ್ರ ಆಚರಿಸಲಾಗುತ್ತದೆ.

ಕುಂಭಮೇಳವು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಹಾಗೂ ಉಜ್ಜಯಿನಿಲ್ಲಿ ಆಚರಿಸಲಾಗುತ್ತದೆ. ಈ ನಾಲ್ಕು ಜಾಗಗಳಲ್ಲೇ ಯಾಕೆ ಎಂದರೆ, ಅಮೃತಕ್ಕಾಗಿ ಸಮುದ್ರಮಂಥನವಾದ ಜಾಗವೇ ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮಕ್ಷೇತ್ರ ಪ್ರಯಾಗ್ ರಾಜ್. ಅಮೃತಕ್ಕಾಗಿ ಕಿತ್ತಾಟ ನಡೆದಾಗ ಮೋಹಿನಿ ಅವತಾರವೆತ್ತೋ ಮಹಾವಿಷ್ಣು ಆ ಅಮೃತ ತುಂಬಿದ್ದ ಕುಂಭವನ್ನು ಹೊತ್ತೊಯ್ಯುವಾಗ ಅದರ ನಾಲ್ಕು ಹನಿಗಳು ಭೂಮಿಯ ನಾಲ್ಕು ಕಡೆ ಬಿದ್ದವಂತೆ. ಆ ನಾಲ್ಕು ಹನಿಗಳು ಬಿದ್ದ ಜಾಗವೇ ಈ ನಾಲ್ಕು ಪುಣ್ಯಕ್ಷೇತ್ರಗಳು.

RELATED ARTICLES
- Advertisment -
Google search engine

Most Popular