Monday, February 10, 2025
HomeUncategorizedಅಭಿವ್ಯಕ್ತಿ ಸ್ವಾತಂತ್ರ್ಯ ಧಮನ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ:ದಿನಕರ ಬಾಬು.

ಅಭಿವ್ಯಕ್ತಿ ಸ್ವಾತಂತ್ರ್ಯ ಧಮನ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ:ದಿನಕರ ಬಾಬು.

ಮತೀಯವಾದಿಗಳ ಒತ್ತಡಕ್ಕೆ ಮಣಿದು ನೀಡಿದ ಪ್ರಶಸ್ತಿ ಗೆ ತಡೆ ನೀಡಿದ ಸರ್ಕಾರದ, ನಿಲುವನ್ನ ವಿರೋಧಿಸಿ ಪ್ರತಿಭಟಿಸಿದ ಉಡುಪಿ ಬಿಜೆಪಿ ಶಾಸಕರಾದ ಯಶ್ ಪಾಲ್ ಸುವರ್ಣ ಹಾಗೂ ಇತರ ಬಿಜೆಪಿ ಮುಖಂಡರ ವಿರುದ್ಧ ಕೇಸ್ ದಾಖಲು ಮಾಡುವ ಮೂಲಕ ಬೆದರಿಸಿ ದ್ವನಿ ಅಡಗಿಸುವ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ತನ್ನ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ಸ್ಪಷ್ಟ ಪಡಿಸುತ್ತಿದೆ.

ಆಡಳಿತ ವೈಖರಿಯನ್ನು ಪ್ರಶ್ನಿಸುವ ಹಕ್ಕನ್ನು ಪ್ರಶ್ನಿಸಿದ ಶಾಸಕರ ವಿರುದ್ಧ ಪ್ರಕರಣ ದಾಖಲು ಮಾಡಿದರೆ ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನಾಗಬೇಡ..!!??

ಸದಾ ಸಂವಿದಾನ ಉಳಿಸಿ ಎಂದು ಕಿರುಚಾಡುವ ಕೇಂದ್ರ ಕಾಂಗ್ರೆಸ್ ನಾಯಕರಿಗೆ ತನ್ನ ಕೈ ಕೆಳಗಿನ ಕಾಂಗ್ರೆಸ್ಸ್ ನಾಯಕರ ನಡೆ ಗಮನಕ್ಕೆ ಬಾರದೆ ಇರುವುದು ರಾಜ್ಯದ ಜನರ ವಿಪರ್ಯಾಸ ಅಲ್ಲದೆ ಇನ್ನೇನು..??

ತಕ್ಷಣವೇ ಬಿಜೆಪಿ ಮುಖಂಡರ ವಿರುದ್ಧ ದಾಖಲಾದ ಪ್ರಕರಣ ಹಿಂಪಡೆಯಬೇಕು ಎಂದು ಈ ಮೂಲಕ ಎಸ್ ಸಿ ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ದಿನಕರ ಬಾಬು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದರು.

RELATED ARTICLES
- Advertisment -
Google search engine

Most Popular