ಉತ್ತರ ಪ್ರದೇಶ: ಟ್ಯೂಷನ್ ಶಿಕ್ಷಕನೊಬ್ಬ 2 ನೇ ತರಗತಿ ಬಾಲಕಿಯ ಜಡೆ ಹಿಡಿದು ಎಳೆದೊಯ್ಧು ಮನಬಂದಂತೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಶಿಕ್ಷಕ ಬಾಲಕಿಗೆ ಇತರ ವಿದ್ಯಾರ್ಥಿಗಳ ಮುಂದೆ ಕೂದಲು ಎಳೆದು ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿ ಶಿಕ್ಷಕನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಶಿಕ್ಷಕ ಪುಟ್ಟ ಬಾಲಕಿಯ ಜಡೆ ಹಿಡಿದು ಬೆನ್ನಿಗೆ ಸರಿಯಾಗಿ ಬಾರಿಸುತ್ತಿರುವುದನ್ನು ಕಾಣಬಹುದು. ಇದಲ್ಲದೇ ಬಾಲಕಿ ನೋವಿನಿಂದ ಅಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪ್ರಾರಂಭದಲ್ಲಿ ಕೈಯಿಂದ ಬಾರಿಸುತ್ತಿದ್ದ ಶಿಕ್ಷಕ ಬಳಿಕ ಕೋಲಿನಿಂದ ಬಾಲಕಿಗೆ ಹೊಡೆಯಲು ಪ್ರಾರಂಭಿಸಿದ್ದಾರೆ. ಸದ್ಯ ಕ್ರೂರ ಕೃತ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಿಕ್ಷಕನ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.