Saturday, June 14, 2025
Homeಅಪರಾಧಪತಿ ಮೊಬೈಲ್ ಕಿತ್ತುಕೊಂಡನೆಂದು ಕಟ್ಟಿ ಹಾಕಿ ವಿದ್ಯುತ್ ಶಾಕ್ ನೀಡಿದ ಪತ್ನಿ

ಪತಿ ಮೊಬೈಲ್ ಕಿತ್ತುಕೊಂಡನೆಂದು ಕಟ್ಟಿ ಹಾಕಿ ವಿದ್ಯುತ್ ಶಾಕ್ ನೀಡಿದ ಪತ್ನಿ

ಉತ್ತರ ಪ್ರದೇಶ : ಪತಿ ಮೊಬೈಲ್ ಕಿತ್ತುಕೊಂಡನೆಂದು ಪತ್ನಿ ವಿದ್ಯುತ್ ಶಾಕ್ ನೀಡಿದ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. 33 ವರ್ಷದ ಮಹಿಳೆ ಬೇಬಿ ಯಾದವ್ ತನ್ನ ಪತಿ ಪ್ರದೀಪ್ ಸಿಂಗ್ ಮೊಬೈಲ್ ಕಿತ್ತುಕೊಂಡನೆಂದು ಮೊದಲಿಗೆ ಅಮಲು ಪದಾರ್ಥ ನೀಡಿ ಹಾಸಿಗೆಗೆ ಕಟ್ಟಿ ಹಾಕಿದ್ದಾಳೆ. ನಂತರ ಆತನನ್ನು ಥಳಿಸಿದ್ದಾಳೆ ಬಳಿಕ ವಿದ್ಯುತ್ ಶಾಕ್ ನೀಡಿದ್ದಾಳೆ.

ತಾಯಿಯ ವಿಚಿತ್ರ ವರ್ತನೆಯನ್ನು ಕಂಡ 14 ವರ್ಷದ ಮಗ ತಂದೆಯನ್ನು ಕಾಪಾಡಲು ಮುಂದಾಗಿದ್ದಾನೆ. ಈ ವೇಳೆ ತಾಯಿ ಆತನಿಗೂ ಥಳಿಸಿದ್ದಾಳೆ. ಸದ್ಯ ಪತಿ ಪ್ರದೀಪ್ ಸೈಫೈ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪತಿ ಪ್ರದೀಪ್ ಸಿಂಗ್ ಹೇಳುವಂತೆ, ನನ್ನ ಪತ್ನಿ ದಿನಾಲು ಮೊಬೈಲ್‌ನಲ್ಲಿ ಮಾತನಾಡುತ್ತಿರುತ್ತಾಳೆ. ನಾನು ಅದನ್ನು ವಿರೋಧಿಸಿದೆ ಮತ್ತು ಆಕೆಯ ಮನೆಯವರಿಗೆ ತಿಳಿಸಿದ್ದೇನೆ. ಇದರಿಂದ ಕೋಪಗೊಂಡ ಆಕೆ ನನಗೆ ಬೆದರಿಕೆ ಹಾಕಿದ್ದಳು. ಕಳೆದ ವಾರ ನನ್ನ ಮತ್ತು ಮಗನ ಮೇಲೆ ಹಲ್ಲೆ ಮಾಡಿದ್ದಾಳೆ, ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ಮಾಡಿದ್ದಾಳೆ ಎಂದು ಹೇಳಿದ್ದಾರೆ.

2007ರಲ್ಲಿ ಪ್ರದೀಪ್ ಸಿಂಗ್ ಔರೈಯಾದ ದಿವಾನ್ ಸಿಂಗ್ ಅವರ ಮಗಳಾದ ಬೇಬಿ ಯಾದವ್ ಅವರನ್ನು ವಿವಾಹವಾಗುತ್ತಾರೆ.

RELATED ARTICLES
- Advertisment -
Google search engine

Most Popular