ಬಜಪೆ:ನಾಗರಿಕ ಸೇವಾ ಸಮಿತಿ (ರಿ) ಅಂಬೇಡ್ಕರ್ ನಗರ ಕರಂಬಾರು ಇದರ 11ನೇ ವರ್ಷದ ವಾರ್ಷಿಕೋತ್ಸವ ವು ಅಂಬೇಡ್ಕರ್ ನಗರ ಕರಂಬಾರಿನಲ್ಲಿ ನಡೆಯಿತು.ಕಾರ್ಯಕ್ರಮವನ್ನು ಪೇಜಾವರದ ಎಸ್ ಡಿ ಫುಡ್ಸ್ ನ ಮಾಲಕ ನಂದಕುಮಾರ್ ಶೆಟ್ಟಿ ಅವರು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ನಾಗರಿಕ ಸೇವಾ ಸಮಿತಿಯು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದು,ಸಮಿತಿಯ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭೋಜರಾಜ್ ಕೋಟ್ಯಾನ್ ಅವರು ತಮ್ಮ ಸಮಿತಿಯಿಂದ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಲಿದೆ ಎಂಬ ಭರವಸೆಯನ್ನು ನೀಡಿದರು. ಬಡ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ನೆರವು ಸಮಿತಿಯಿಂದ ನೆರವೇರಿಸುವ ಕಾರ್ಯದಲ್ಲಿ ತೊಡಗುವಲ್ಲಿ ನಾವೆಲ್ಲರೂ ಮುಂದಾಗುತ್ತೇವೆ ಎಂದು ಹೇಳಿದರು.
ಈ ಸಂದರ್ಭ ಜಗನ್ನಾಥ್ ಸಾಲ್ಯಾನ್, ರಾಜೇಶ್ ಅಮೀನ್,ಸದಾಶಿವ ಪಡುಬಿದ್ರಿ,ವಾಸು ಪೇಜಾವರ,ಸತೀಶ್ ದೇವಾಡಿಗ,ವಿಶ್ವನಾಥ್ ಕೋಟ್ಯಾನ್, ಗೋಪಾಲಕೃಷ್ಣ ಪುನರೂರು,ದಿನೇಶ್ ಶೆಟ್ಟಿ,ರಮೇಶ್ ಸುವರ್ಣ,ಗ್ರೇಶನ್ ಡಿ ಕೋಸ್ತಾ ಹಾಗು ಶಶಿಕಲಾ ರಮೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರಾದ ರಾಜೇಶ್ ಅಮೀನ್ ಹಾಗು ಸವಿತಾ ಇವರನ್ನು ಸನ್ಮಾನಿಸಲಾಯಿತು. ತೃಪ್ತಿ ಬಿ. ಕೆ ಕಾರ್ಯಕ್ರಮ ನಿರೂಪಿಸಿದರು.ಕೃತಿ ಬಿ ಕೋಟ್ಯಾನ್ ಸ್ವಾಗತಿಸಿ,ರಾಕೇಶ್ ಕುಂದರ್ ವಂದಿಸಿದರು.