ಕಿನ್ನಿಗೋಳಿ: ಅಡಿಕೆ ಹಾಗೂ ಹಿಂಗಾರ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ತೋಟದ ಕೆಲಸಗಾರರು ಹಿಡಿದ ಘಟನೆ ನಡೆದಿದೆ. ಅಡಿಕೆ ತೋಟಗಳಲ್ಲಿ ಅಡಿಕೆ ಕದಿಯುತ್ತಿದ್ದ ಅಂಗಾರಗುಡ್ಡೆ ನಿವಾಸಿ 52ರ ಹರೆಯದ ವಿಜಯ ಎಂಬಾತನನ್ನು ಕೆಲಸಗಾರರು ಪತ್ತೆಹಚ್ಚಿ ಹಿಡಿದಿದ್ದಾರೆ. ಬಳಿಕ ಆತನನ್ನು ಮುಲ್ಕಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಕೆಂಚನಕೆರೆಯ ಶ್ರೀಕಾಂತ ಶೆಟ್ಟಿ ಎಂಬವರ ತೋಟದಲ್ಲಿ ಹಿಂಗಾರ ಕಳವು ಮಾಡುತ್ತಿದ್ದ ವೇಳೆ ವಿಜಯನನ್ನು ಹಿಡಿಯಲಾಗಿದೆ. ತೋಟದ ಕೆಲಸಗಾರ ನಾರಾಯಣ ಎಂಬವರು ವಿಜಯ ಹಿಂಗಾರ ಕಳ್ಳತನ ಮಾಡುವುದನ್ನು ಕಂಡು ಹಿಡಿಯಲೆತ್ನಿಸಿದ್ದಾರೆ. ಈ ವೇಳೆ ವಿಜಯ ಚೂರಿಯಿಂದ ದಾಳಿ ಮಾಡಲು ಯತ್ನಿಸಿದ್ದಾನೆ. ಇದರಿಂದ ತಪ್ಪಿಸಿಕೊಂಡು ನಾರಾಯಣ ಕಿರುಚಿದ್ದರಿಂದ ಇತರ ಕೆಲಸಗಾರರೂ ಆಗಮಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸುಮಾರು ಎರಡು ಕ್ವಿಂಟಾಲ್ ಅಡಿಕೆ ಹಾಗೂ 500ಕ್ಕೂ ಹೆಚ್ಚು ಹಿಂಗಾರ ಕಳವುಗೈಯಲಾಗಿದೆ ಎಂದು ಶ್ರೀಕಾಂತ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.