Wednesday, July 24, 2024
Homeರಾಜಕೀಯಬಿಜೆಪಿ ಸಮಾವೇಶ ನಡೆದ ಮೈದಾನದ ಶುಚಿತ್ವ ಕಾರ್ಯದಲ್ಲಿ ಭಾಗಿಯಾದ ಯದುವೀರ್ ದಂಪತಿ

ಬಿಜೆಪಿ ಸಮಾವೇಶ ನಡೆದ ಮೈದಾನದ ಶುಚಿತ್ವ ಕಾರ್ಯದಲ್ಲಿ ಭಾಗಿಯಾದ ಯದುವೀರ್ ದಂಪತಿ

ಮೈಸೂರು: ಲೋಕಸಭೆ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಮೈಸೂರಿಗೆ ಭೇಟಿ ನೀಡಿದ್ದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಸಮಾವೇಶ ನಡೆದಿದೆ. ಇದೀಗ ಸಮಾವೇಶ ನಡೆದ ಮೈದಾನವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಯದುವೀರ್ ಒಡೆಯರ್ ಮತ್ತು ಅವರ ಪತ್ನಿ ಭಾಗವಹಿಸಿದುದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಸಮಾವೇಶದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಸಮಾವೇಶದ ಮೈದಾನದಲ್ಲಿ ಜನರು ನೀರಿನ ಬಾಟಲಿಗಳು, ತಿಂಡಿ ಕವರ್ ಗಳನ್ನು ಎಸೆದು ಸಾಕಷ್ಟು ಕಸ ಸಂಗ್ರಹವಾಗಿತ್ತು. ಈ ಕಸ ಹೆಕ್ಕುವಾಗ ಕಾರ್ಯಕರ್ತರ ಜೊತೆ ಯದುವೀರ್ ಮತ್ತು ಅವರ ಪತ್ನಿ ತ್ರಿಷಿಕಾ ಕುಮಾರಿ ಸಿಂಗ್ ತಾವೂ ಭಾಗಿಯಾಗಿದ್ದಾರೆ. ಶುಚಿತ್ವ ಕಾರ್ಯದಲ್ಲಿ ಭಾಗಿಯಾದ ದಂಪತಿ ಎಲ್ಲೆಡೆ ಗಮನ ಸೆಳೆದಿದ್ದಾರೆ.

RELATED ARTICLES
- Advertisment -
Google search engine

Most Popular