ಇತ್ತೀಚಿನ ದಿನಗಳಲ್ಲಿ ಹತ್ಯೆಗಳಿಗೆ ಕಾರಣಗಳು ವಿಚಿತ್ರವಾಗುತ್ತಿವೆ. ಈ ಕಾರಣಗಳನ್ನು ಕೇಳುವ ಪೊಲೀಸರೇ ಸುಸ್ತಾಗಿ ಹೋಗುತ್ತಿದ್ದಾರೆ. ಈ ಬೆಳವಣಿವೆ ನಡುವೆ ಇಂತಹುದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯಲ್ಲಿ ತನ್ನ ಪ್ರಿಯಕರನೊಂದಿಗೆ ಆಕೆ ಮಾಡಬಾರದನ್ನೆಲ್ಲಾ ಮಾಡಿಕೊಂಡು ನಂತರ ಆತನನ್ನು ಹತ್ಯೆ ಮಾಡಿದ್ದಾಳೆ.
ಈ ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಸಂಪೂರ್ಣ ತನಿಖೆಯ ನಂತರ, ಪೊಲೀಸರು ಹಂತಕರನ್ನು ಪತ್ತೆ ಮಾಡಿದ್ದಾರೆ. ಸೋನು ಹತ್ಯೆಗಾಗಿ ಐಐಟಿ ವಿದ್ಯಾರ್ಥಿನಿ ಮೆಹನಾಜ್, ಆಕೆಯ ಸಹೋದರ ಸದ್ದಾಂ ಮತ್ತು ಅವರ ಸ್ನೇಹಿತ ರಿಜ್ವಾನ್ ಅವರನ್ನು ಬಂಧಿಸಿದ್ದಾರೆ.
ಸೋನು ಜೊತೆಗಿನ ಸಂಭಾಷಣೆಯ ಬಗ್ಗೆ ಪೊಲೀಸರು ಮೆಹನಾಜ್ ಅವರನ್ನು ಕೇಳಿದಾಗ ಆಕೆ ಆರಂಭದಲ್ಲಿ ಯಾವುದೇ ಮಾಹಿತಿ ನೀಡಿರಲಿಲ್ಲ. ಕಠಿಣ ವಿಚಾರಣೆಯ ನಂತರ, ಮೆಹನಾಜ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಮೊರಾದಾಬಾದ್‌ನ ಬಿಲಾರಿ ಪ್ರದೇಶದ ನಿವಾಸಿ ಸಬೀರ್ ಎಂಬಾತ ತನ್ನ ಮಗ ಸೋನು ತನ್ನ ಬೈಕ್‌ನಲ್ಲಿ ಮನೆಯಿಂದ ಹೊರಟು ಹೋಗಿದ್ದು, ಅಂದಿನಿಂದ ಹಿಂತಿರುಗಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಪೊಲೀಸರು ತಕ್ಷಣ ನಾಪತ್ತೆಯಾದವರ ವರದಿಯನ್ನು ದಾಖಲಿಸಿಕೊಂಡು ಸೋನುಗಾಗಿ ಹುಡುಕಲಾರಂಭಿಸಿದರು. ಎರಡು ದಿನಗಳ ನಂತರ, ರಾಂಪುರ ಜಿಲ್ಲೆಯ ಸೈಫ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಲವೊಂದರಲ್ಲಿ ತಲೆಯಿಲ್ಲದ ಶವ ಪತ್ತೆಯಾಗಿತ್ತು. ಮೃತದೇಹವನ್ನು ಗುರುತಿಸಲು ಪೊಲೀಸರು ಸೋನು ಕುಟುಂಬವನ್ನು ಕರೆಸಿದ್ದಾರೆ. ತಲೆ ಇಲ್ಲದ ಮೃತದೇಹ ಸೋನು ಎಂದು ಕುಟುಂಬದವರು ಗುರುತಿಸಿದ್ದಾರೆ.
ಕಠಿಣ ವಿಚಾರಣೆ ಬಳಿಕ ಒಪ್ಪಿಕೊಂಡ ಯುವತಿ
ಪೊಲೀಸರು ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿದ್ದು, ಸೋನು ಅವರ ಮೊಬೈಲ್ ಫೋನ್‌ನ ಕರೆ ವಿವರಗಳ ದಾಖಲೆಯನ್ನು (ಸಿಡಿಆರ್) ವಶಪಡಿಸಿಕೊಂಡಿದ್ದಾರೆ. ಸೋನು ಅವರ ಕೊನೆಯ ಸಂಭಾಷಣೆಯು ಮೆಹನಾಜ್ ಎಂಬ ಹುಡುಗಿಯೊಂದಿಗೆ ಆಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಮೆಹನಾಜ್ ಅವರನ್ನು ವಿಚಾರಣೆಗೆ ಒಳಪಡಿಸಲು ಬಯಸಿದಾಗ, ಮೊದಲಿಗೆ ಅವಳು ಸೋನು ಜೊತೆ ಯಾವುದೇ ಸಂಭಾಷಣೆಯನ್ನು ನಿರಾಕರಿಸಿದ್ದಳು. ಆದರೆ, ಆಕೆಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮೆಹನಾಜ್ ಏನು ಅನ್ನೋದನ್ನು ತಿಳಿಸಿದ್ದಾಳೆ.
ಕಾಲೇಜಿಗೆ ಹೋಗುವಾಗ ಸೋನು ಅವರನ್ನು ಭೇಟಿಯಾಗಿದ್ದೆ ಎಂದು ಮೆಹನಾಜ್ ಹೇಳಿದ್ದಾಳೆ. ಸೋನು ತನ್ನ ಕೆಲವು ಚಿತ್ರಗಳನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರಹಸ್ಯವಾಗಿ ಸೆರೆಹಿಡಿದ್ದನು. ಇದಾದ ನನಗೆ ಆತ ಬ್ಲಾಕ್ ಮೇಲ್ ಮಾಡುತ್ತಿದ್ದ, ಪದೇ ಪದೇ ಭೇಟಿಯಾಗುವಂತೆ ಒತ್ತಡ ಹೇರುತ್ತಿದ್ದ. ಸಮಸ್ಯೆ ಹೆಚ್ಚಾದಾಗ ಮೆಹನಾಜ್ ತನ್ನ ಸಹೋದರ ಸದ್ದಾಂ ಬಳಿ ಹೇಳಿದ್ದಾಳೆ. ಸದ್ದಾಂ ತನ್ನ ಸ್ನೇಹಿತನೊಂದಿಗೆ ಸೋನುಗೆ ಪಾಠ ಕಲಿಸಲು ಯೋಜನೆ ಹಾಕಿದ್ದಾರೆ. ಇದಾದ ನಂತರ ಸೆಪ್ಟೆಂಬರ್ 9 ರಂದು ಸೋನುವನ್ನು ಭೇಟಿಯಾಗಲು ಕರೆದಿದ್ದಾರೆ.
ಪಿತೂರಿಯ ಭಾಗವಾಗಿ ಸದ್ದಾಂ ಮತ್ತು ಅವನ ಸ್ನೇಹಿತರು ಸೋನುವನ್ನು ಸೈಫ್ನಿ ರಸ್ತೆಗೆ ಕರೆದುಕೊಂಡು ಬಂದಿದ್ದಾರೆ. ಸೋನು ಅಲ್ಲಿಗೆ ತಲುಪಿದಾಗ, ಮಹನಾಜ್ ಅವನನ್ನು ಕಬ್ಬಿನ ಗದ್ದೆಗೆ ಕರೆದೊಯ್ದಿದ್ದಾಳೆ. ಅಲ್ಲಿ ಸದ್ದಾಂ ಮತ್ತು ಅವನ ಸ್ನೇಹಿತರು ಹಿಂದಿನಿಂದ ಬಂದು ಸೋನುವನ್ನು ನೆಲಕ್ಕೆ ಬೀಳುವಂತೆ ಮಾಡಿದ್ದಾರೆ. ಅವರನ್ನು ಹಗ್ಗದಿಂದ ಕಟ್ಟಿ ಚಾಕುವಿನಿಂದ ಕತ್ತು ಸೀಳಿದ್ದಾರೆ. ಇದಾದ ನಂತರ, ಸೋನು ಅವರ ಬಟ್ಟೆ, ಚಪ್ಪಲಿ ಮತ್ತು ತಲೆಯನ್ನು ಚೀಲದಲ್ಲಿ ಹಾಕಿ ಸೈಫ್ನಿ ಪಟ್ಟಣದ ಟ್ರೆಂಚಿಂಗ್ ಗ್ರೌಂಡ್‌ನಲ್ಲಿ ಎಸೆದಿದ್ದಾರೆ. ಇದಾದ ಬಳಿಕ ಸಾಕ್ಷ್ಯ ನಾಶಪಡಿಸಲು ಎಲ್ಲ ವಸ್ತುಗಳನ್ನು ಪೆಟ್ರೋಲ್ ಹಾಕಿ ಸುಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.