Saturday, April 19, 2025
Homeಉಡುಪಿವಿಶ್ವ ಸಾಂಸ್ಕೃತಿಕ ಪರಂಪರೆಗೆ ರಂಗಭೂಮಿ ನೀಡಿದ ಕೊಡುಗೆ ಶ್ರೇಷ್ಠವಾದುದು -ವಿಜಯ ಶೆಟ್ಟಿ

ವಿಶ್ವ ಸಾಂಸ್ಕೃತಿಕ ಪರಂಪರೆಗೆ ರಂಗಭೂಮಿ ನೀಡಿದ ಕೊಡುಗೆ ಶ್ರೇಷ್ಠವಾದುದು -ವಿಜಯ ಶೆಟ್ಟಿ

ಜೀವನವನ್ನು ಸಹಜವಾಗಿ ಆಸ್ವಾಧಿಸುವ ಬಗೆಯನ್ನು ತಿಳಿಸುವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಮೂಡಿಸುವ ಕಲೆಯಾದ ನಾಟಕಗಳ ಮೂಲಕ ವಿಶ್ವ ಸಾಂಸ್ಕೃತಿಕ ಪರಂಪರೆಗೆ ರಂಗಭೂಮಿ ಕೊಟ್ಟ ಕೊಡುಗೆ ಶ್ರೇಷ್ಠವಾದುದು.

ಇಂತಹ ವಿಶೇಷವಾದ ಹಿನ್ನೆಲೆಯನ್ನು ಹೊಂದಿರುವ ನಾಟಕಗಳನ್ನು ಪ್ರತಿದಿನ ದೊಡ್ಡ ಸಂಖ್ಯೆಯಲ್ಲಿ ಬಂದು ನೋಡಿ ಪ್ರೋತ್ಸಾಹಿಸಿದ ಸಾಂಸ್ಕೃತಿಕ ಮನಸ್ಸುಳ್ಳ ಕಾರ್ಕಳದ ನಾಟಕಾಭಿಮಾನಿಗಳ ಬಗ್ಗೆ ಯಕ್ಷಕಲಾರಂಗ ಕಾರ್ಕಳ ಇದರ ಅಧ್ಯಕ್ಷರಾದ ವಿಜಯ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಯಕ್ಷ ರಂಗಾಯಣ ಕಾರ್ಕಳ ಹಾಗೂ ರಂಗ ಸಂಸ್ಕೃತಿ ಕಾರ್ಕಳ ಇವರ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ ಹನ್ನೊಂದನೇ ವರ್ಷದ ಬಿ.ಗಣಪತಿ ಪೈ ರಂಗೋತ್ಸವ ‘ಮಾಗಿ-ಸುಗ್ಗಿ ನಾಟಕ ಹಬ್ಬದ ಸಮಾರೋಪ ಸಮಾರಂಭದ ಸಮಾರೋಪ ನುಡಿಗಳನ್ನಾಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ರಂಗ ಸಂಸ್ಜೃತಿ ಕಾರ್ಕಳದ ಅಧ್ಯಕ್ಷರಾದ ನಿತ್ಯಾನಂದ ಪೈ ನಾಟಕೋತ್ಸವಕ್ಕೆ ಸಹಕರಿಸಿದ ಸರ್ವರನ್ನು ಕೃತಜ್ಞತೆಯಿಂದ ಸ್ಮರಿಸಿದರು.

ಈ ಸಂದರ್ಭದಲ್ಲಿ ಪ್ರತಿದಿನ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟ ಖ್ಯಾತ ಗಾಯಕರಾದ ಶಿವಕುಮಾರ್ ಮತ್ರು ರಮ್ಯ ಸುಧೀಂದ್ರ ಅವರನ್ನು ಹಾಗೂ ಭೂಮಿಕಾ ಹಾರಾಡಿ ನಾಟಕ ತಂಡದ ನಿರ್ದೇಶಕರಾದ ರಾಮ್ ಶೆಟ್ಟಿಯವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ರಂಗ ಸಂಸ್ಕೃತಿಯ ಸ್ಥಾಪಕ ಕಾರ್ಯದರ್ಶಿ ಹಿರಿಯ ಸಾಹಿತಿ ಜಯಪ್ರಕಾಶ್ ಮಾವಿನಕುಳಿ, ನಾಟಕೋತ್ಸವದ ಸಂಚಾಲಕರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ರಂಗ ನಿರ್ದೇಶಕರಾದ ಚಂದ್ರನಾಥ ಬಜಗೋಳಿ ಉಪಸ್ಥಿತರಿದ್ದರು.

ನಾಟಕೋತ್ಸವದ ಸಹಸಂಚಾಲಕರಾದ ನಾಗೇಶ್ ನಲ್ಲೂರು ಸ್ವಾಗತಿಸಿ, ಗಣೇಶ್ ಜಾಲ್ಸೂರು ನಿರ್ವಹಿಸಿ ನಿವೃತ್ತ ಶಿಕ್ಷಕರಾದ ವಸಂತ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಭೂಮಿಕಾ ಹಾರಾಡಿ ತಂಡದ ರಾಮ್ ಶೆಟ್ಟಿ ಹಾರಾಡಿ ನಿರ್ದೇಶನದ “ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ನಾಟಕ ಪ್ರದರ್ಶನಗೊಂಡಿತು.

RELATED ARTICLES
- Advertisment -
Google search engine

Most Popular