ಸುರತ್ಕಲ್: ಬಾಡಿಗೆ ಮನೆಯೊಂದರಿಂದ ಚಿನ್ನ, ಬೆಳ್ಳಿಯ ಸ್ವತ್ತುಗಳನ್ನು ಕಳವುಗೈದ ಆರೋಪಿಯೊಬ್ಬನನ್ನು ಪೊಲೀಸರು ಕಳ್ಳತನವಾದ 24 ಗಂಟೆಗಳೊಳಗೆ ಬಂಧಿಸಿದ್ದಾರೆ. ಸುರತ್ಕಲ್ ರೈಲ್ವೆ ಹಳಿ ಬಳಿಯ ಬಾಡಿಗೆ ಮನೆಯಿಂದ ಕಳವುಗೈದಿದ್ದ ಹೊಸಕೋಟೆ ನಿವಾಸಿ 24ರ ಹರೆಯದ ಜಂಬಯ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕಳ್ಳತನಕ್ಕೆ ಬಳಸಿದ್ದ ಕಾರು, ಮೊಬೈಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಮಿಕ ದಂಪತಿಗಳಾದ ಕಲ್ಲೇಶ್ವರ ಶೇಖಪ್ಪ ನೆಲವಡಿ ಮತ್ತು ಆತನ ಹೆಂಡತಿ ಮತ್ತು ಕುಟುಂಬ ಹದಿಮೂರು ವರ್ಷಗಳಿಂದ ಇಲ್ಲೇ ದುಡಿಯುತ್ತಿದ್ದರು. ಮನೆಯವರೆಲ್ಲಾ ಹೊರಗೆ ಹೋಗಿದ್ದಾಗ ಬೀಗವನ್ನು ಮುರಿದು ಕಳ್ಳತನ ಮಾಡಲಾಗಿತ್ತು. ಮನೆಯ ಹಾಲ್ ನಲ್ಲಿದ್ದ ಕಪಾಟಿನಲ್ಲಿ ಇಟ್ಟಿದ್ದ 2.5 ಲಕ್ಷ ರೂ ಚಿನ್ನ ಹಾಗೂ ಬೆಳ್ಳಿಯ ಆಭರಣ ಹಾಗೂ ಐವತ್ತು ಸಾವಿರ ರೂ ನಗದು ಕಳ್ಳತನಮಾಡಲಾಗಿತ್ತು. ಕಳವಾದ ನಗದು, ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪಡುಬಿದ್ರಿಯ ನಂದಿಕೂರು ಬಳಿ ಆರೋಪಿಯನ್ನು ಬಂಧಿಸಿದ್ದಾರೆ.