ಮಂಗಳೂರು-ಬೆಂಗಳೂರು ಬಸ್ಸಲ್ಲಿ 67 ಲಕ್ಷ ರೂ. ವಜ್ರದ ಹರಳುಗಳುಳ್ಳ ಆಭರಣ ಕಳವು

0
270

ಮಂಗಳೂರು: ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಬಸ್ಸೊಂದರಲ್ಲಿ ಕಳವಾಗಿದೆ ಎಂದು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೈನ ಪ್ಲಾಮಾ ರೆಸಿಡೆನ್ಸಿ ನಿವಾಸಿ ಗೀತಾ ರೈ ಅವರ ಸುಮಾರು 67 ಲಕ್ಷ ರೂ. ಮೌಲ್ಯದ ಆಭರಣ ಕಳವಾಗಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಸಂಬಂಧಿಕ ಕಾರ್ಯಕ್ರಮಕ್ಕೆ ಹೋಗಲೆಂದು ಬ್ಯಾಂಕಿನ ಲಾಕರ್‌ನಲ್ಲಿದ್ದ ಚಿನ್ನಾಭರಣ ಗೀತಾ ರೈ ಪಡೆದುಕೊಂಡಿದ್ದರು. ಜೂ. 15ರಂದು ವಜ್ರದ ಹರಳುಗಳುಳ್ಳ ಸುಮಾರು 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ತಂದು ಮನೆಯಲ್ಲಿ ಹ್ಯಾಂಡ್‌ ಬ್ಯಾಗ್‌ನಲ್ಲಿಟ್ಟಿದ್ದರು. ಜೂ. 19ರಂದು ಕೆಎಸ್ಸಾರ್ಟಿಸಿಯ ಐರಾವತದಲ್ಲಿ ಹ್ಯಾಂಡ್‌ ಬ್ಯಾಗ್‌ ಹಿಡಿದುಕೊಂಡು ಬೆಂಗಳೂರು ಪ್ರಯಾಣ ಬೆಳೆಸಿದ್ದಾಗ ಗೀತಾ ರೈಯವರ ಹಾಸನದಲ್ಲಿ ಹ್ಯಾಂಡ್‌ ಬ್ಯಾಗ್‌ ನೋಡಿದಾಗ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿದೆ.


ಪಕ್ಕದಲ್ಲಿ ಕುಳಿತಿದ್ದ ಮಹಿಳೆ ಕಳವು ಮಾಡಿರುವುದಾಗಿ ಗೀತಾ ರೈ ಶಂಕಿಸಿದ್ದಾರೆ. ಆದರೆ ಮನೆಯಲ್ಲೇ ಯಾರಾದರೂ ಆಭರಣ ತೆಗೆದುಕೊಂಡಿದ್ದರೇ? ಅಥವಾ ಬಸ್ಸಲ್ಲಿ ಕಳವಾಗಿದೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

LEAVE A REPLY

Please enter your comment!
Please enter your name here