ಮೂಡಬಿದಿರೆ: S.N. ಮೂಡುಬಿದ್ರೆ ಪಾಲಿಟೆಕ್ನಿಕ್ ಮೂಡುಬಿದಿರೆ ಇಲ್ಲಿನ NSS ಘಟಕದ ವತಿಯಿಂದ ದಿನಾಂಕ 02-03-2024 ರ ಶನಿವಾರದಂದು Community Outreach Service ಕಾರ್ಯಕ್ರಮದ ಅಂಗವಾಗಿ ಆಯ್ದ 40 ಮಂದಿ NSS ವಿದ್ಯಾರ್ಥಿಗಳು ವೇಣೂರು ಸಮೀಪದ ಕರಿಮಣೆಲು ಗ್ರಾಮದ ತಿಮ್ಮನಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿ ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 2 ಗಂಟೆಯ ತನಕ ಶಾಲೆಯ ಪರಿಸರದ ಸ್ವಚ್ಛತೆಯ ಕೆಲಸವನ್ನು ನೆರವೇರಿಸಿದರು .
ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ SDMC ಉಪಾಧ್ಯಕ್ಷರಾದ ಶ್ರೀಮತಿ ಪ್ರೇಮ ಇವರು ವಹಿಸಿದ್ದರು. ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೇಮಯ್ಯ ಕುಲಾಲ್ , ಸದಸ್ಯರಾದ ಅರುಣ್ ಹೆಗ್ಡೆ, ಬಜಿರೆ ಕ್ಲಸ್ಟರ್ CRP ರಾಜೇಶ್, ಕೊಡುಗೈ ದಾನಿ ಬೇಬಿ ಹೆಗ್ಡೆ, SDMC ಸದಸ್ಯರು , SNM ಪಾಲಿಟೆಕ್ನಿಕ್ ನ NSS ಕಾರ್ಯಕ್ರಮಾಧಿಕಾರಿಗಳಾದ ರಾಮ್ ಪ್ರಸಾದ್ ಹಾಗು ಗೋಪಾಲಕೃಷ್ಣ ಇವರು ವೇದಿಕೆಯಲ್ಲಿ ಉಪಸ್ಥಿತಿ ಇದ್ದರು.
ಶಾಲೆಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮಕ್ಕೆ ಆಗಮಿಸಿದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಹಾಗು NSS ಕಾರ್ಯಕ್ರಮಾಧಿಕಾರಿಗಳಿಗೆ ಸ್ಮರಣಿಕೆ ನೀಡಲಾಯಿತು .
ಶಾಲೆಯ ಮುಖ್ಯ ಶಿಕ್ಷಕಿಯಾದ ಸುನಂದಾ ಪಿ. ಇವರು ಅತಿಥಿಗಳನ್ನು ಸ್ವಾಗತಿಸಿದರು, ಶಿಕ್ಷಕಿ ಶೃತಿ. ಪಿ ಧನ್ಯವಾದ ಸಮರ್ಪಣೆ ಮಾಡಿದರು . ಶಿಕ್ಷಕಿ ಸೌಮ್ಯ ಬಿ ಇವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.