ಬೆಂಗಳೂರು: ಬೆಂಗಳೂರಿನ ಬ್ಯಾಂಕರ್ಸ್ ಕನ್ನಡಿಗರ ಬಳಗವು ಬ್ಯಾಂಕ್ ಉದ್ಯೋಗಿಗಳಿಗಾಗಿ ಆಯೋಜಿಸಿದ್ದ ಕವನ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿ, ಪಟ್ಟಿ ಪ್ರಕಟಿಸಿದೆ.
ವಿಜೇತರ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಬಳಗದ ಅಧ್ಯಕ್ಷ ಶ್ರೀ ಎಂ ವೆಂಕಟೇಶ ಶೇಷಾದ್ರಿ, ಪ್ರಸ್ತುತ ಬ್ಯಾಂಕ್ ಸೇವೆಯಲ್ಲಿರುವ ಮತ್ತು ನಿವೃತ್ತ ಉದ್ಯೋಗಿಗಳಿಗೆ 2 ವಿಭಾಗಗಳಲ್ಲಿ ಏರ್ಪಡಿಸಿದ್ದ ಕವನ ಸ್ಪರ್ಧೆಗಳಲ್ಲಿ ಒಟ್ಟಾರೆ 70ಕ್ಕಿಂತ ಹೆಚ್ಚಿನ ಬ್ಯಾಂಕ್ ಉದ್ಯೋಗಿಗಳು ಭಾಗವಹಿಸಿದ್ದರು ಎಂದರು. ಈ ಸ್ಪರ್ಧೆಗಳ ವಿಜೇತರಿಗೆ ಪ್ರಮಾಣಪತ್ರ ಮತ್ತು ಬಹುಮಾನ ರೂಪದಲ್ಲಿ ಕನ್ನಡ ಪುಸ್ತಕಗಳನ್ನು ನೀಡಲಾಗುವುದು ಎಂದ ಅವರು ತಿಳಿಸಿದರು.
ಬಹುಮಾನ ವಿಜೇತರ ಪಟ್ಟಿ: ಸೇವೆಯಲ್ಲಿರುವ ಬ್ಯಾಂಕ್ ಉದ್ಯೋಗಿಗಳ ವಿಭಾಗ – ಮೊದಲ ಬಹುಮಾನ: ಶಿವಪ್ರಸಾದ್ ಕುಲಕರ್ಣಿ (ಧಾರವಾಡ), 2ನೇ ಬಹುಮಾನ: ಸ್ನೇಹ ಶಶಿಧರ (ಮೈಸೂರು), 3ನೇ ಬಹುಮಾನ: ಹೆಚ್. ಲತಾ (ಮಂಗಳೂರು).
ಪ್ರೋತ್ಸಾಹಕ ಬಹುಮಾನಗಳು: ಉಷಾ ಜಿ.ಎ (ಬೆಂಗಳೂರು), ಶರತ್ ಕಾಮತ್ (ಹೈದರಾಬಾದ್) ಹಾಗೂ ರಾಜಕುಮಾರ್ ಎಸ್ ಅಂಬೆಸಂಗೆ (ಹುಬ್ಬಳ್ಳಿ).
ನಿವೃತ್ತ ಬ್ಯಾಂಕ್ ಉದ್ಯೋಗಿಗಳ ವಿಭಾಗ: ಮೊದಲ ಬಹುಮಾನ: ರಮೇಶ್ ಟಿ.ಎಂ (ಸಿದ್ಧಾಪುರ), 2ನೇ ಬಹುಮಾನ: ಅನಂತ ರಮೇಶ್ (ಬೆಂಗಳೂರು), 3ನೇ ಬಹುಮಾನ: ಎಸ್. ಮಂಜುನಾಥ್(ಬೆಂಗಳೂರು).
ಪ್ರೋತ್ಸಾಹಕ ಬಹುಮಾನಗಳು: ರೇಣುಕಾ ದೇಸಾಯಿ (ಬೆಂಗಳೂರು), ಸು. ನಾಗರಾಜ್ (ಬೆಂಗಳೂರು) ಮತ್ತು ದೀಪಕ್ ಜೋಶಿ (ಬೆಳಗಾವಿ).
ಈ ಸಂದರ್ಭದಲ್ಲಿ ಬಳಗದ ವಿಶೇಷ ಸಲಹೆಗಾರ ಬಿ.ಎನ್. ರಮೇಶ್ ಕುಮಾರ್ ಮತ್ತು ಕಾರ್ಯದರ್ಶಿ ಕೆ.ಜಿ. ಸಂಪತ್ ಕುಮಾರ್ ಉಪಸ್ಥಿತರಿದ್ದರು.