ಭಾರತ ಸರ್ಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ ಮಂಗಳೂರು,
ಕರ್ನಾಟಕ ಸರಕಾರ, ದ.ಕ ಜಿಲ್ಲಾಡಳಿತ,ದ.ಕ ಜಿಲ್ಲಾ ಪಂಚಾಯತ್,ಮೂಲ್ಕಿ ತಾಲೂಕು ಪಂಚಾಯತ್,ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಸಹಯೋಗದಲ್ಲಿ ಜಿಲ್ಲಾ ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು,ಹಳೆಯಂಗಡಿ. ಹಾಗೂ ವಿವಿಧ ಸಂಘ ಸಂಸ್ಥೆಗಳ ಉಪಸ್ಥಿತಿಯಲ್ಲಿ ದಿನಾಂಕ 15/9/2024 ರಂದು ರವಿವಾರ ಬೆಳಿಗ್ಗೆ ಘಂಟೆ 8:00 ರಿಂದ 10:00 ರ ವರೆಗೆ ಗ್ರಾಮ ಪಂಚಾಯತ್ ಪಡುಪಣಂಬೂರು ವ್ಯಾಪ್ತಿಯಲ್ಲಿ ಕೊಲ್ನಾಡು ಜಂಕ್ಷನ್ ನಿಂದ ಪಡುಪಣಂಬೂರು ಪೆಟ್ರೋಲ್ ಪಂಪ್ ವರೆಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆಯ ಪ್ರಯುಕ್ತ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಜರುಗಿತು.
ಅಭಿಯಾನದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಸುಧೀರ್,ಕಾರ್ಯದರ್ಶಿ ಶ್ರೀಮತಿ ಸುಜಾತಾ.ಎಚ್ ಅಧ್ಯಕ್ಷರಾದ ಶ್ರೀಮತಿ ಕುಸುಮಾ ಚಂದ್ರಶೇಖರ್,ಉಪಾಧ್ಯಕ್ಷರಾದ ಶ್ರೀ ಹೇಮನಾಥ ಅಮೀನ್, ಪಂಚಾಯತ್ ಸದಸ್ಯರು,ಸಿಬ್ಬಂದಿ ವರ್ಗ ಹಾಗೂ ಸ್ಪೋರ್ಟ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ದೀಪಕ್ ಸುವರ್ಣ, ಉಪಾಧ್ಯಕ್ಷ ಶ್ರೀ ಸಂತೋಷ್ ಕುಮಾರ್,ಕಾರ್ಯಾಧ್ಯಕ್ಷ ಶ್ರೀ ಸಂತೋಷ್ ದೇವಾಡಿಗ,ನಿಕಟ ಪೂರ್ವ ಅಧ್ಯಕ್ಷ ಶ್ರೀ ಜಗದೀಶ್ ಕುಲಾಲ್,ಮಾಜಿ ಅಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ,ಜೊತೆ ಕಾರ್ಯದರ್ಶಿ ಶ್ರೀ ಚಂದ್ರ ಸುವರ್ಣ,ಸದಸ್ಯರಾದ ಶ್ರೀ ಗಣೇಶ್ ದೇವಾಡಿಗ,ಶ್ರೀ ಸಂಪತ್ ದೇವಾಡಿಗ,ಶ್ರೀ ಗೌತಮ್ ಬೆಲ್ಚಡ,ಶ್ರೀ ಪ್ರಮೋದ್ ಆಚಾರ್ಯ, ಶ್ರೀ ಚಂದ್ರಶೇಖರ್ ದೇವಾಡಿಗ,ಶ್ರೀ ರಮೇಶ್ ಕರ್ಕೇರ,ಶ್ರೀ ಪಾಂಡುರಂಗ,ಮಾ|ಅಹನ್ ಹಾಗೂ ವಿವಿಧ ಸಂಘ – ಸಂಸ್ಥೆಗಳ ಅಧ್ಯಕ್ಷರುಗಳು,ಸದಸ್ಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.