ಅಪ್ಪೆ ಬಾಸೆ ಪೊರ್ಂಬಾಟ ಕೂಟ ತುಲುನಾಡ್ ವತಿಯಿಂದ ತಾರೀಖು 27-11-2022 ರಂದು ಸಂಜೆ 4 ಗಂಟೆಯಿಂದ ಸುರತ್ಕಲ್ ಕರ್ನಾಟಕ ಸೇವಾ ವೃಂದ ಸಂಭಾಗಣದಲ್ಲಿ ಆಯೋಜಿಸಿರುವ “ತೊರ್ತಲ್ಡ್ ತುಲು ಉಚ್ಚಯ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಂದು ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಮ ನಿಕಟ ಪೂರ್ವ ಅಧ್ಯಕ್ಷರಾದ ದಯಾನಂದ ಜಿ ಕತ್ತಲ್ಸರ್, ಸದಸ್ಯರಾದ ನಾಗೇಶ್ ಕುಲಾಲ್, ದೇವಳದ ಅರ್ಚಕರಾದ ವಿದ್ಯಾಧರ ಭಟ್,ಶಂಕರ ಭಟ್, ತುಳು ಕೂಟ ಕತಾರ್ನ ಕಾರ್ಯದರ್ಶಿ ಪುನೀತ್ ಸಾಗರ್ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸುದರ್ಶನ್ ಸುರತ್ಕಲ್, ರಾಜ್ಶೇಖರ, ಪ್ರದೀಪ್ ರಾಜ್ ಮಂಗಳೂರು,
ಅರುಣ್ ಸುರತ್ಕಲ್, ವಿನೋದ್ ಶೆಟ್ಟಿ, ಸಂದೀಪ್ ಮಧ್ಯ ಅಕ್ಷಯ್ ಪೇಜಾವರ ಮುಂತಾದವರು ಉಪಸ್ಥಿತರಿದ್ದರು.